ಪಾವಗಡ: ತಾಲ್ಲೂಕಿನ ವೀರಮ್ಮನಹಳ್ಳಿ ತಾಂಡಾ ಗ್ರಾಮದಲ್ಲಿ ಮುಂದಿನ ತಿಂಗಳು ಸಂತ ಶ್ರೀ ಸೇವಾಲಾಲ್ ಮಹಾರಾಜ್ ಹಾಗೂ ಮರಿಯಮ್ಮ ದೇವಿಯ ದೇವಸ್ಥಾನ ಪ್ರತಿಷ್ಠಾಪನೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದಕ್ಕೆ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಹಾಗೂ ಮರಿಯಮ್ಮ ದೇವಿ ಬರಬೇಕಾಗಿದ್ದ ವಿಗ್ರಹಗಳಿಗೆ ಪಾವಗಡ ಪಟ್ಟಣದಿಂದ ವೀರಮ್ಮನಹಳ್ಳಿ ತಾಂಡಾ ಗ್ರಾಮದ ಅವರಿಗೂ ಮಹಿಳೆಯರು ಲಂಬಾಣಿ ನೆನಪುಗಳನ್ನು ತೊಟ್ಟು ನಮ್ಮ ಸಾಂಪ್ರದಾಯಿಕ ನೃತ್ಯವನ್ನು ಹಾಡಿದರು. ಹಿರಿಯರು ಹಾಗೂ ಯುವಕರು ಕುಣಿದು ಕುಪ್ಪಳಿಸಿದರು.
ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಏಪ್ರಿಲ್ 16, 17 ಹಾಗೂ 18 ರಂದು ವೀರಮ್ಮನಹಳ್ಳಿ ತಾಂಡಾ ಗ್ರಾಮದಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಹಾಗೂ ಮರಿಯಮ್ಮ ದೇವಿ ದೇವಸ್ಥಾನ ಪ್ರತಿಷ್ಠಾಪನ ಕಾರ್ಯಕ್ರಮವಿದ್ದು, ಬದರಿ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಕುಲಬಾಂಧವರು ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ವೀರಮ್ಮನಹಳ್ಳಿ ತಾಂಡ ಗ್ರಾಮಸ್ಥರು ತಿಳಿಸಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4