ಭುವನೇಶ್ವರ : ಹೊಟೇಲ್ ನಲ್ಲಿ ಇಬ್ಬರು ಯುವತಿಯರ ಜೊತೆಗೆ ಸರಸವಾಡುತ್ತಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಭುವನೇಶ್ವರದ ಪಾಟಿಯಾ ಪ್ರದೇಶದಲ್ಲಿ ನಡೆದಿದೆ.
ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಹೋಗಿದ್ದ ಪತ್ನಿ ಇನ್ಫೋಸಿಟಿ ಪೊಲೀಸರ ಸಹಕಾರದೊಂದಿಗೆ ಹೊಟೇಲ್ ಗೆ ನುಗ್ಗಿದ್ದಾಳೆ. ಮುಂಜಾನೆ 3 ಗಂಟೆಯ ವೇಳೆಗೆ ಆಕೆಯ ಪತಿ ಇಬ್ಬರು ಬೆಂಗಾಲಿ ಯುವತಿಯರೊಂದಿಗೆ ಸರಸ ಸಲ್ಲಾಪದಲ್ಲಿ ನಿರತನಾಗಿದ್ದ. ಈ ವೇಳೆ ರೆಡ್ ಹ್ಯಾಂಡ್ ಆಗಿ ಪತ್ನಿ ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದಾಳಿ ವೇಳೆ ಹೊಟೇಲ್ ನಲ್ಲಿ ಮದ್ಯದ ಬಾಟಲಿಗಳು, ಆಕ್ಷೇಪಾರ್ಹ ವಸ್ತುಗಳು ಸಿಕ್ಕಿವೆ. ತನ್ನ ಪತಿ ಇಂಜಿನಿಯರ್ ಆಗಿದ್ದ ಇದೀಗ ಆತ ತನ್ನ ವೃತ್ತಿ ಬದಲಿಸಿದ್ದಾನೆ. ಸೆಕ್ಸ್ ದಂಧೆ ನಡೆಸ್ತಾ ಇದ್ದಾನೆ ಎನ್ನುವ ಶಂಕೆ ಇದೆ ಅಂತ ಮಹಿಳೆ ಆರೋಪಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಆರೋಪಿ ಪತಿ ಹಾಗೂ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಪತಿ ಸದ್ಯ ರ್ಯಾಪರ್ ಆಗಿ ಕೆಲಸ ಮಾಡ್ತಾ ಇದ್ದ ಎಂದು ಹೇಳಲಾಗುತ್ತಿದೆ. ಈತನ ವಿರುದ್ಧ ಭುವನೇಶ್ವರದ ನಂದಂಕನನ್ ಮತ್ತು ಚಂದ್ರಶೇಖರಪುರ ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q