ದಾವಣಗೆರೆ: ಪ್ರಿಯತಮೆಗಾಗಿ ಪತ್ನಿಯನ್ನೇ ಕೊಂದು ಕೆರೆಗೆಸೆದ ಘಟನೆ ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ನಡೆದಿದೆ. ಕಾವ್ಯ ಕೊಲೆಯಾಗಿರುವ ಗೃಹಿಣಿಯಾಗಿದ್ದು, ಪತಿ ಸಚಿನ್ ಆರೋಪಿಯಾಗಿದ್ದಾನೆ.
ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ, ಮುದ್ದಾದ ಒಂದು ಮಗು ಕೂಡ ಇತ್ತು. ಆದರೆ, ಬೇರೆ ಮಹಿಳೆಯರ ಚಟ ಹೊಂದಿದ್ದ ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಬಾಕೆಯನ್ನು ಪ್ರೀತಿಸಿ, ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ.
ಇನ್ನು ಇವರಿಬ್ಬರ ಸಂಬಂಧಕ್ಕೆ ಮೊದಲನೇ ಪತ್ನಿಯಾದ ಕಾವ್ಯ ಅಡ್ಡಿಯಾದ ಕಾರಣದಿಂದಾಗಿ, ಆಕೆಯನ್ನು ಕತ್ತು ಹಿಸುಕಿ ಕೊಂದು ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ಕಾವ್ಯ ಕಾಣದೇ ಇರುವುದರಿಂದ ಅವರ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ಗಂಡ ಸಚಿನ್ ನನ್ನು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಗಂಡ ಬಾಯ್ಬಿಟ್ಟಿದ್ದಾರೆ. ಸಚಿನ್ ಹಾಗೂ ಚೈತ್ರ ಸೇರಿಕೊಂಡು ಕಾವ್ಯಾಳ ಕತೆ ಮುಗಿಸಿ ಮೃತದೇಹ ಕೆರೆಗೆ ಎಸೆದಿದ್ದಾರೆ.


