ಗುಜರಾತ್ : ಮಧ್ಯರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದವರಿಗೆ ರಸ್ತೆಯಲ್ಲಿ ಸಿಂಹವೊಂದು ಎದುರಾದ ಘಟನೆ ಗುಜರಾತ್ ನಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಬ್ಬರು ಮಧ್ಯರಾತ್ರಿ ಬೈಕ್ ನಲ್ಲಿ ರಸ್ತೆಯಲ್ಲಿ ಬರುತ್ತಿದ್ದರು. ಬೈಕ್ ತಿರುವುವೊಂದನ್ನು ದಾಟಿ ಮುಂದೆ ಹೋಗುತ್ತಿದ್ದಂತೆಯೇ ಏಕಾಏಕಿ ನಿಂತು ಬಿಡುತ್ತದೆ. ಈ ವೇಳೆ ಹಿಂಬದಿ ಸವಾರ ಬೈಕ್ ನಿಂದ ಇಳಿದು ಎದ್ದೂ ಬಿದ್ದು ಓಡುತ್ತಾನೆ, ನಂತರ ಬೈಕ್ ಸವಾರ ಕೂಡ ಬೈಕ್ ನ್ನು ಸ್ಥಳದಲ್ಲೇ ಸ್ಟಾಂಡ್ ಹಾಕಿ ನಿಲ್ಲಿಸಿ, ಓಡುತ್ತಾನೆ. ಸ್ವಲ್ಪ ಹೊತ್ತಲ್ಲೇ ಸಿಂಹ ಇವರಿಬ್ಬರನ್ನು ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೈಕ್ ನ ಹೆಡ್ ಲೈಟ್ ನಿಂದಾಗಿ ಸಿಂಹಕ್ಕೆ ಇದು ಮನುಷ್ಯರು ಎನ್ನುವುದು ಏಕಾಏಕಿ ತಿಳಿಯಲಿಲ್ಲ ಅನ್ಸುತ್ತೆ ಇಲ್ಲವಾದ್ರೆ ಬೈಕ್ ಸವಾರರ ಕಥೆ ಮುಗಿಯುತ್ತಿತ್ತು ಅಂತ ನೆಟ್ಟಿಗರು ಈ ವಿಡಿಯೋಕ್ಕೆ ಕಾಮೆಂಟ್ ಹಾಕಿದ್ದಾರೆ.
Damn💀
pic.twitter.com/p6Q0yW9Nv3— Ghar Ke Kalesh (@gharkekalesh) October 10, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q