ಚಿತ್ರದುರ್ಗ: ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಕತ್ತು ಕೊಯ್ದು ಪ್ರಿಯತಮೆ ಹತ್ಯೆಗೆ ಪ್ರಿಯಕರ ಯತ್ನಿಸಿದ ಘಟನೆ ನಡೆದಿದೆ. ಸಮೀನಾ(25) ಅವರ ಕತ್ತು ಕೊಯ್ದು ಪರಾರಿಯಾಗಿದ್ದಾನೆ.
ಸಮೀನಾಳನ್ನ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ದಾದಾಪೀರ್ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸುಲ್ತಾನಪುರದಲ್ಲಿ ವಾಸವಾಗಿದ್ದ ದಾದಾಪೀರ್-ಸಮೀನಾ ಇಬ್ಬರ ನಡುವೆ ಕಳೆದ ಒಂದು ತಿಂಗಳಿಂದ ಆಗಾಗ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿ ಕೂಡ ಗಲಾಟೆ ನಡೆದಿದ್ದು ಸಮೀನಾಳ ಕತ್ತು ಕೊಯ್ದು ಹತ್ಯೆಗೆ ದಾದಾಪೀರ್ ಯತ್ನಿಸಿದ್ದಾನೆ. ಕತ್ತು ಕೊಯ್ದು ಪರಾರಿಯಾಗಿದ್ದಾನೆ.
ಸ್ಥಳೀಯರು ಸಮೀನಾಳನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸಮೀನಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


