ಅಮೆರಿಕದ ಮೈನ್ ನ ಲೆವಿಸ್ಟನ್ ನಲ್ಲಿರುವ ರೆಸ್ಟೋರೆಂಟ್ ನಲ್ಲಿ ರಾಬರ್ಟ್ ಕಾರ್ಡ್ ಎಂಬಾತ ನಡೆಸಿದ ಗುಂಡಿನ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ ಎಂದು ತಿಳಿದಿದೆ. ಆದರೆ ಆತನಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ರಾಬರ್ಟ್ ಶವವಾಗಿ ಪತ್ತೆಯಾಗಿದ್ದಾನೆ.
ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹದ ಬಳಿ ಡೆತ್ ನೋಟ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆತ ಆತ್ಮಹತ್ಯೆ ಪತ್ರದಲ್ಲಿ ಏನು ಬರೆದಿದ್ದಾನೆ ಎಂಬುದನ್ನು ಅಮೆರಿಕ ಪೊಲೀಸರು ಬಹಿರಂಗಪಡಿಸಿಲ್ಲ.


