ಚಕ್ಕುಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಚಿರ್ಯಾಲ್ ನ ಹಮಾಲಿವಾಡದಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕನಾಗಿದ್ದ ಎನ್. ರಂಗರಾವ್(65) ಸಂಜೆ ಚಹಾ ಕುಡಿಯುವ ವೇಳೆ ತಿಂಡಿಯಾಗಿ ಚಕ್ಕುಲಿ ತಿಂದಿದ್ದಾರೆ.
ಎಲ್ಲರ ಜೊತೆಯಲ್ಲಿ ಖುಷಿಯಾಗಿ ಚಾ ಕುಡಿಯುತ್ತಿದ್ದ ವ್ಯಕ್ತಿ ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ರಂಗರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿಹೇಳಿದ್ದಾರೆ.
ರಂಗರಾವ್ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಜೆಯ ವೇಳೆ ಚಹಾದ ಜೊತೆಗೆ ಸೇವಿಸಿದ್ದ ಚಕ್ಕುಲಿ ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ರಂಗರಾವ್ ಮೃತಪಟ್ಟಿರುವುದು ತನಿಖೆಯ ವೇಳೆ ತಿಳಿದುಬಂದಿದ್ದು, ಮಂಚಿರ್ಯಾಲ ಸಬ್ ಇನ್ಸ್ ಪೆಕ್ಟರ್ ರಾಜೇಂದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


