ಮೈಸೂರು: ತನ್ನ ಸ್ನೇಹಿತನಿಗೆ ಹಣ, ಕಾರು ಸಾಲ ತನ್ನ ಹೆಸರಿನಲ್ಲಿ ತೆಗೆಸಿಕೊಟ್ಟಿದ್ದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದು, ಇದೀಗ ಬ್ಯಾಂಕ್ ಸಾಲ ತೀರಿಸಲಾಗದೇ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ತಾಲೂಕಿನ ದಂಡಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಮುಲ್ಲೂಪುರ ಗ್ರಾಮದ ಸಿದ್ದೇಶ್ (40) ಆತ್ಮಹತ್ಯೆಗೆ ಶರಣಾಗಿರುವವರು ಎಂದು ತಿಳಿದು ಬಂದಿದೆ. ಸಿದ್ದೇಶ್ ತನ್ನ ಸ್ನೇಹಿತ ಮಣಿಕಂಠ ಎಂಬಾತನಿಗೆ ಬ್ಯಾಂಕ್ ನಲ್ಲಿ ಕಾರು ಹಾಗೂ ತನ್ನ ಹೆಸರಿನಲ್ಲಿ 2 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಆದರೆ ಸ್ನೇಹಿತ 2 ಕಂತು ಕಟ್ಟಿ ಸುಮ್ಮನಾಗಿದ್ದ. ಇದರಿಂದಾಗಿ ಸಾಲತೀರಿಸಿ ಎಂದು ಬ್ಯಾಂಕ್ ನವರು ಸಿದ್ದೇಶ್ ಗೆ ಕರೆ ಮಾಡುತ್ತಿದ್ದರು.
ಬ್ಯಾಂಕ್ ನವರ ಕರೆ ಹೆಚ್ಚಾಗುತ್ತಿದ್ದಂತೆಯೇ ಸಿದ್ದೇಶ್ ಮಾನಸಿಕವಾಗಿ ನೊಂದು, ಸ್ನೇಹಿತನಿಗೆ ಸಾಲ ತೆಗೆಸಿಕೊಟ್ಟಿರುವ ವಿಚಾರದ ಬಗ್ಗೆ ವಿಡಿಯೋ ಮಾಡಿ, ಬಳಿಕ ಸಾವಿಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ವರುಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4