ಮಧುಗಿರಿ: ಪೂರ್ವಜನರ ಕಾಲದಿಂದ ಶವ ಹೂಳುತಿದ್ದ ಗ್ರಾಮದ ಸ್ಮಶಾನದ ಜಾಗವನ್ನು ತನ್ನೆದೆಂದು ವ್ಯಕ್ತಿಯೊಬ್ಬರು ಸ್ಮಶಾನದಲ್ಲಿದ್ದ ಗೋರಿಗಳನ್ನು ಜೆಸಿಬಿ ಯಂತ್ರ ಬಳಸಿ ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ.
ತಾಲ್ಲೂಕಿನ ಐ.ಡಿ ಹಳ್ಳಿ ಹೋಬಳಿ ಚಿಕ್ಕದಾಳವಟ್ಟ ಗ್ರಾಪಂ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ, ನೂರಾರು ವರ್ಷಗಳಿಂದ ಪೂರ್ವಜರ ಅನುಮತಿ ಮೇರೆಗೆ ಗ್ರಾಮದ ಸರ್ವೆ ನಂ೪/೧ ರಲ್ಲಿ, ಸುಮಾರು ೧೦ ಗುಂಟೆ ಜಾಗದಲ್ಲಿ ತಲೆ ತಲಾಂತರಗಳಿಂದ ಅಂತ್ಯ ಸಂಸ್ಕಾರ ಮಾಡುತಿದ್ದು, ಮಲ್ಲಿಕಾರ್ಜುನ್ ಎಂಬ ವ್ಯಕ್ತಿ ಸದರಿ ಜಾಗ ತನ್ನೆದೆಂದು ಏಕಾಏಕಿ ಜೆಸಿಬಿ ಯಂತ್ರಗಳನ್ನು ಬಳಸಿ ೧೯ ಗೋರಿಗಳ ಧ್ವಂಸ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಪ್ರತಿ ವರ್ಷ ಯುಗಾದಿ ಹಬ್ಬದ ಸಮೀಪದಲ್ಲಿ ಹಿರಿಯ ಸಮಾಧಿಗಳಿಗೆ ಸುಣ್ಣಬಣ್ಣ ಮಾಡಿಸಿ ಪೂಜೆ ಮಾಡುತಿದ್ದೇವು. ಆದರೆ, ಇದೀಗಾ ಸಮಾಧಿಗಳೇ ಇಲ್ಲದ ಕಾರಣ ಯಾರಿಗೆ ಪೂಜೆ ಸಲ್ಲಿಸಬೇಕು ಎಂದು ದಿಕ್ಕು ತೋಚದಂತಾಗಿದೆ” ಎಂದು ಗ್ರಾಮಸ್ಥರು ಸಮಾಧಿಗಳ ಕಲ್ಲುಗಳ ಮೇಲೆ ಗೋಳಾಡುತ್ತಾ ಕಣ್ಣಿರಿಟ್ಟ ಘಟನೆ ಮನಕಲುಕುವಂತಿತ್ತು.
ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ನಮಗೆ ನ್ಯಾಯ ಸಿಕ್ಕಿಲ್ಲ, ಸದರಿ ವಿಚಾರವನ್ನು ಸಚಿವರ ಗಮನಕ್ಕು ತರಲಾಗುವುದು. ಈ ಬಗ್ಗೆ ತಾಲ್ಲೂಕು ದಂಡಾಧಿಕಾರಿಗಳಿಗೂ ದೂರು ನೀಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


