ಫಿಲಿಪೈನ್ಸ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಭೂಕಂಪನ ವರದಿಯಾಗಿದೆ. ಭಾರೀ ಭೂಕಂಪದ ನಂತರ, ಜಪಾನ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಯಿತು. ಭೂಕಂಪದ ಕೇಂದ್ರಬಿಂದು ಮಿಂಡನಾವೊ ದ್ವೀಪವಾಗಿತ್ತು.
ರಾತ್ರಿ 10:37ಕ್ಕೆ ಫಿಲಿಪೈನ್ಸ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. 39 ಮೈಲಿ (63 ಕಿಮೀ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್–ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಸಮುದ್ರದಲ್ಲಿ ಕೆಲವು ವ್ಯತ್ಯಯಗಳನ್ನು ನಿರೀಕ್ಷಿಸಲಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಸುನಾಮಿ ಬಗ್ಗೆ ಹೆಚ್ಚಿನ ಆತಂಕವಿಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆ ಹೇಳಿದೆ.
ಕಳೆದ ತಿಂಗಳು ನವೆಂಬರ್ ನಲ್ಲಿ ದಕ್ಷಿಣ ಮಿಂಡನಾವೊದಲ್ಲಿ 6.7 ತೀವ್ರತೆಯ ಭೂಕಂಪ ವರದಿಯಾಗಿತ್ತು. ಆದಾಗ್ಯೂ, ಪ್ರದೇಶದಲ್ಲಿ ಯಾವುದೇ ಗಮನಾರ್ಹ ಹಾನಿ ಸಂಭವಿಸಿಲ್ಲ. ಈ ಪ್ರದೇಶದಲ್ಲಿ ಕೆಲವೊಮ್ಮೆ ಭೂಕಂಪಗಳು ವರದಿಯಾಗುತ್ತವೆ.


