ಬೆಂಗಳೂರು: ಫಿಟ್ನೆಸ್ ಸೆಂಟರ್ ನಲ್ಲಿ ಕಾಮುಕ ಕೋಚ್ ಒಬ್ಬ ನೀಚ ಕೆಲಸ ಮಾಡಿದ್ದಾನೆ. ವರ್ಕ್ಔಟ್ ಮುಗಿಸಿ ಮಹಿಳೆ ಸ್ನಾನ ಮಾಡುವುದನ್ನು ಕಾಮುಕ ಕೋಚ್ ವೀಡಿಯೊ ಮಾಡಿದ್ದಾನೆ. ಬಾಣಸವಾಡಿ ಎನ್ ಆರ್ ಐ ಲೇಔಟ್ ನಲ್ಲಿರುವ ಫಿಟ್ನೆಸ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.
ಬಾಣಸವಾಡಿ ಪೊಲೀಸರು ಜಿಮ್ ಕೋಚ್ ಸಿಬಿಯಾಚನ್ ಎಂಬಾತನನ್ನು ಬಂಧಿಸಿದ್ದಾರೆ. ಮಹಿಳಾ ಟೆಕ್ಕಿಯೊಬ್ಬರು ವರ್ಕ್ ಔಟ್ ಮುಗಿಸಿ ಸ್ನಾನ ಮಾಡಲು ಬಾತ್ ರೂಂಗೆ ತೆರಳಿದ್ದರು. ಈ ವೇಳೆ ಸಿಬಿಯಾಚನ್ ನ ಕಿಟಕಿಯ ಮೂಲಕ ಮೊಬೈಲ್ ಹಿಡಿದು ರೆಕಾರ್ಡಿಂಗ್ ಮಾಡುತ್ತಿದ್ದ.
ಈ ವೇಳೆ ಟೆಕ್ಕಿಗೆ ಸಣ್ಣದೊಂದು ಅನುಮಾನ ಬಂದಿದೆ. ಕೂಡಲೇ ಹೊರಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಆದರೂ ಯಾರೋ ಲೇಡಿಸ್ ಟಾಯ್ಲೆಟ್ ಬಳಿ ಬಂದು ಹೋಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಜಿಮ್ ಮ್ಯಾನೇಜರ್ಗೆ ದೂರು ನೀಡಿದ್ದಾರೆ. ಈ ವೇಳೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ.


