ದೆಹಲಿ: ಅಪ್ರಾಪ್ತ ಬಾಲಕನನ್ನು ಆರು ಮಂದಿ ಸ್ನೇಹಿತರು ಸೇರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 17 ವರ್ಷದ ವಿವೇಕ್ ಮೃತ ದುರ್ದೈವಿಯಾಗಿದ್ದಾನೆ.
ಸ್ನೇಹಿತರಲ್ಲಿ ಒಬ್ಬಾತ ಮದ್ಯಪಾನ ಮಾಡಲೆಂದು ಆತನನ್ನು ಆಹ್ವಾನಿಸಿದ್ದ ಬಳಿಕ ಆರು ಮಂದಿ ಸ್ನೇಹಿತರು ಸೇರಿ ಚಾಕುವಿನಿಂದ ಚುಚ್ಚಿ, ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.
ಸತ್ಪುಲಾ ಪಾರ್ಕ್ ಗೆ ಕರೆದೊಯ್ದು ಹತ್ಯೆ ಮಾಡಲಾಗಿದೆ. ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿವೇಕ್ ವಿರುದ್ಧ ಹಗೆ ಸಾಧಿಸಲು ಈ ಸಂಚು ರೂಪಿಸಿದ್ದರು.
ಬಾಲಕ ಮನೆಯಿಂದ ಹೊರ ಹೋಗುವಾಗ ತಂದೆಯನ್ನು ಭೇಟಿಯಾಗಲು ಹೋಗುವುದಾಗಿ ಸುಳ್ಳು ಹೇಳಿದ್ದ, ಹಿಂದಿರುಗದಿದ್ದಾಗ ಹಲವು ಬಾರಿ ಕರೆ ಮಾಡಿದ್ದಾರೆ ಆದರೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.


