ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ರಾಮನಾಯಕನ ಹಳ್ಳಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.
ರಾಮನಾಯಕನಹಳ್ಳಿ ಗ್ರಾಮದ ವೀರಾಂಜನೇಯ ಸ್ವಾಮಿ ದೇವಾಲಯದ ಬಾಗಿಲಿನಲ್ಲಿ ಕೋತಿ ಪ್ರಾಣ ಬಿಟ್ಟಿದೆ. ವಿಶೇಷ ಅಂದರೆ ಕೋತಿಯ ನಡೆ ವಿಸ್ಮಯ ಹಾಗೂ ಪವಾಡಕ್ಕೆ ಸಾಕ್ಷಿಯಾಗಿದೆ. ಕೋತಿ ದಿನನಿತ್ಯ ದೇವಾಲಯದ ಬಳಿಯೇ ಓಡಾಡಿಕೊಂಡಿತ್ತು.
ಭೀಮನ ಅಮಾವಾಸೆ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಯಂಕಾಲ ದೇವಾಲಯ ಬಾಗಿಲು ಹಾಕಿಕೊಂಡು ಅರ್ಚಕ ರಾಮಕೃಷ್ಣಯ್ಯ ಮನೆ ಹೋಗಿದ್ದಾರೆ. ಮರುದಿನ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕೋತಿ ಬಾಗಿಲ ಬಳಿ ಮಲಗಿತ್ತು. ಹತ್ತಿರ ಬಂದು ನೋಡಿದಾಗ ಕೈಮುಗಿದ ರೀತಿಯಲ್ಲಿ ಕೋತಿ ಪ್ರಾಣ ಬಿಟ್ಟಿತ್ತು.
ಕೋತಿ ದೇವಾಲಯದ ಮುಖ್ಯದ್ವಾರದ ಬಳಿ ತಲೆ ಇಟ್ಟು ಆಂಜನೇಯನಿಗೆ ನಮಿಸಿ ಕೊನೆಯುಸಿರು ಎಳೆದಿದೆ. ವಿಷಯ ತಿಳಿದು ಗ್ರಾಮಸ್ಥರು ದೇವಾಲಯದ ಬಳಿ ಜಮಾಯಿಸಿದ್ದಾರೆ. ನಂತರ ಕೋತಿಗೆ ಪೂಜೆ ಮಾಡಿ ದೇವಾಲಯದ ಬಲ ಭಾಗದಲ್ಲಿ ಅಂತಿಮಸಂಸ್ಕಾರ ನೆರವೇರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


