ಬೆಂಗಳೂರು: ತಾಯಿಯೊಬ್ಬಳು ತನ್ನ ಮಗನ ಮೇಲೆಯೇ ಪೆಟ್ರೋಲ್ ಎರಚಿ ಸುಟ್ಟು ಹಾಕಿದ ಪ್ರಸಂಗವೊಂದು ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಚಾಂದ್ ಪಾಷಾ (40) ಕೊಲೆಯಾದ ವ್ಯಕ್ತಿ. ಈತ ಪ್ರತಿನಿತ್ಯ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದನು. ಈತನ ರ್ವನೆಯಿಂದ ಬೇಸತ್ತ ಪತ್ನಿ ಬಿಟ್ಟು ಹೋಗಿದ್ದಳು. ಹೀಗಾಗಿ ಪಾಷಾ ತನ್ನ ತಾಯಿ ಜೊತೆ ವಾಸವಾಗಿದ್ದನು.
ಸೋಮವಾರವೂ ಕುಡಿದುಕೊಂಡು ಬಂದು ತಾಯಿ ಜೊತೆ ಗಲಾಟೆ ಮಾಡಿದ್ದನು. ಬಳಿಕ ಸಂಜೆ 4:45 ರ ಸುಮಾರಿಗೆ ಮತ್ತೆ ಕಂಠಪೂರ್ತಿ ಕುಡಿದು ಬಂದು ಮನೆಯ ಹೊರಗಡೆ ಕುಳಿತಿದ್ದನು. ಈ ವೇಳೆ ತಾಯಿ ಆತನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಕೊಟ್ಟಿದ್ದಾರೆ.
ಘಟನೆ ಸಂಬಂಧ ಆರೋಪಿ ತಾಯಿ ಸೂಫಿಯಾಳನ್ನ ಪೊಲೀಸರು ಬಂಧಿಸಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


