ರಾಜ್ಯದಲ್ಲಿ ವಾಟ್ಸಾಪ್ ಮೂಲಕ ಜನರಿಗೆ ಸುಲಭವಾಗಿ ಮಾಹಿತಿ ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ನಡುವೆ ಮಾಹಿತಿ ಸಂವಹನವನ್ನು ಸುಗಮಗೊಳಿಸಿ ವಾಟ್ಸಾಪ್ ಮೂಲಕ ಜನರಿಗೆ ಸುಲಭವಾಗಿ ಮಾಹಿತಿ ತಲುಪಿಸಲು ಐಟಿಬಿಟಿ/ಆರ್ ಟಿಪಿಆರ್ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಚಾಟ್ ಬಾಟ್ ಅಭಿವೃದ್ಧಿಪಡಿಸುವುದು ಎಂದು ಹೇಳಿದರು.
ಆನ್ ಲೈನ್ ಸುರಕ್ಷತೆ ಕುರಿತ ಮಾಹಿತಿಗಳು ಮತ್ತು ಜಾಗೃತಿ ಸಂದೇಶಗಳನ್ನು ಜನತೆಗೆ ತಲುಪಿಸಲು ಡಿಜಿಟಲ್ ಸುರಕ್ಷತಾ ಚಾಟ್ ಬಾಟ್ ಅಭಿವೃದ್ಧಿಪಡಿಸುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ ಮತ್ತು ಗೇಮಿಂಗ್ ಕ್ಷೇತ್ರಗಳಿಗಾಗಿ ಕರ್ನಾಟಕ ಸರ್ಕಾರ ಮತ್ತು ಮೆಟಾದ AR/VRನ ಪಾಲುದಾರಿಕೆ ಸಾಧ್ಯವಾಗಲಿದೆ ಎಂದು ಹೇಳಿದರು.


