ಸಾಂಪ್ರದಾಯಿಕ ಕಲೆಗಳ ಪರಂಪರೆ ಮತ್ತು ಜನಪದ ಸಂಸ್ಕೃತಿಯ ಸೊಬಗಿನ ನಡುವೆ, ಸ್ಥಳೀಯ ಪ್ರತಿಭೆಗಳನ್ನು ಅಣಿಗೊಳಿಸಿ ರೂಪುಗೊಂಡಿರುವ ಹೊಸ ದೃಶ್ಯಮಾಲಿಕೆ “ಪ್ರೊಡಕ್ಷನ್ ನಂ 01” ಇದೀಗ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶ್ರೀ ಗಂಗಾಧರೇಶ್ವರ ಸ್ವಾಮಿಗಳ ಆಶೀರ್ವಾದದಿಂದ,
ಕಲ್ಪತರು ಪ್ರೊಡಕ್ಷನ್ ರವರಿಂದ ಪ್ರಥಮ ಕೃತಿಯಾಗಿ ಮೂಡಿ ಬಂದಿರುವ ಈ ಕೃತಿ ಕನ್ನಡ ಸಂಸ್ಕೃತಿಯ ಮಣ್ಣಿನ ವಾಸನೆ ತಂದುಕೊಡುವ ಭರವಸೆ ವ್ಯಕ್ತಪಡಿಸಿದೆ.
ಕಥೆ -– ಚಿತ್ರಕಥೆ -– ಸಂಭಾಷಣೆ / ಸಹಿತ / ನಿರ್ದೇಶನ
ಶ್ರೀಕಾಂತ್ ಕುಮಾರ್
ನಿರ್ಮಾಪಕರು
ಭೋಜರಾಜ್ -– ವೆಂಕಟೇಶ್
ಪ್ರಚಾರ ಗೀತೆ
ಕುಶಿ ಇವೆಂಟ್

ಬಾಯಾಗ್ರಾಹಕ/ಅಡ್ವೈಜ ರ್‌ಗಳು
ಕಲಾವಿದರು ಭೋಜರಾಜ್, ವೆಂಕಟೇಶ್, ಕುಮಾರ್, ಶ್ರೀಕಾಂತ್, ಶುಭಾ
ಚಿತ್ರದ ಹೈಲೈಟ್ಸ್:
ಮೂಲಭೂತ ಜನಪದ ಭಾವನೆಗಳು
ಮಣ್ಣಿನ ಸಂಗತಿ, ಸಂಸ್ಕೃತಿ ಮತ್ತು ಮನುಷ್ಯ ಮೌಲ್ಯಗಳ ತೆರೆಯ ಮೇಲೆ ಮೂಡಿಸುವ ಪ್ರಯತ್ನ
ಶ್ರದ್ಧಾ, ನಂಬಿಕೆ ಮತ್ತು ಕಲೆಯನ್ನು ಸೇರ್ಪಡಿಸುವ ಸುಂದರ ಯತ್ನ
ವಿಶೇಷ ಸಂದೇಶ:
“ಸಮಾಜದ ನಾಡಿಯ ಜನತೆಗೆ — ಕನ್ನಡ ರಾಷ್ಟ್ರೋತ್ಥಾನದ ಶುಭಾಶಯಗಳು” ಎಂಬ ಘೋಷಣೆಯ ಮೂಲಕ ಈ ಚಿತ್ರ ಕೇವಲ ಮನರಂಜನೆಗಿಂತ ಹೆಚ್ಚಿನ ಪ್ರೇರಣೆ ನೀಡುವ ಪ್ರಯತ್ನ ಮಾಡುತ್ತಿದೆ.
ಇದು ಕೇವಲ ಪ್ರೊಜೆಕ್ಟ್ ಅಲ್ಲ –- ಇದು ನಮ್ಮ ಸಂಸ್ಕೃತಿ, ನಮ್ಮ ಮಣ್ಣು, ನಮ್ಮ ಕನಸುಗಳ ಚಿತ್ರಣ.
ತುಮಕೂರಿನಿಂದಲೇ ಹುಟ್ಟಿದ ಈ ಹೊಸ ಕ್ರಿಯಾತ್ಮಕ ಪ್ರಯತ್ನಕ್ಕೆ ಪ್ರೇಕ್ಷಕರ ಬೆಂಬಲ ದೊರೆತರೆ, ಇನ್ನಷ್ಟು ಸೃಜನಶೀಲ ಚಿತ್ರಗಳು ಬೆಳಕಿಗೆ ಬರಲು ಇದು ದಾರಿದೀಪವಾಗಲಿದೆ.
“ಪೋಡೆಕ್ಷನ್ ನಂ 01” -– ಪರದೆ ಮೇಲಿನ ಹೊಸ ಪ್ರಯೋಗಕ್ಕೆ ಶುಭಾರಂಭ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


