ಕೊಪ್ಪಳ: ಕೊಪ್ಪಳದ ಮಸೀದಿಯೊಂದರ ಮುಂಭಾಗ 27 ವರ್ಷದ ಗವಿಸಿದ್ದಪ್ಪ ನಾಯಕ್ ಎಂಬಾತನನ್ನು ಆಗಸ್ಟ್ 3ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಕೊಪ್ಪಳ ಠಾಣೆ ಪೊಲೀಸರು ಕೊಲೆಯಾದ ಗವಿಸಿದ್ದಪ್ಪ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಗವಿಸಿದ್ದಪ್ಪ ಹತ್ಯೆಗೆ ಕಾರಣ ಎನ್ನಲಾದ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೃತ ಗವಿಸಿದ್ದಪ್ಪ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿಯ ತಾಯಿ ಗವಿಸಿದ್ದಪ್ಪನ ಹತ್ಯೆಯಲ್ಲಿ ನನ್ನ ಮಗಳ ಪಾತ್ರವಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈ ಬಳಿಕ ದೂರು ದಾಖಲಿಸಿದ್ದರು.
ಮುಸ್ಲಿಂ ಬಾಲಕಿ ಜೊತೆಗಿನ ಪ್ರೀತಿ ಹಿನ್ನೆಲೆಯಲ್ಲಿ ಸಾದಿಕ್ ಎಂಬಾತ ಗವಿಸಿದ್ದಪ್ಪನನ್ನು ಮಸೀದಿ ಮುಂದೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು ಎನ್ನಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC