ಆತ ಮದುವೆಯಾಗಿ ಪತ್ನಿಗೆ ವಿಚ್ಛೇದನ ಕೊಟ್ಟಿದ್ದ. ಈ ನಡುವೆ ಮೂರು ವರ್ಷದ ಹಿಂದೆ ಮತ್ತೊಬ್ಬಳ ಜೊತೆ ಮದುವೆಯಾಗಿದ್ದನು. ಅವಳಿಗೂ ಪತಿಯಿಂದ ವಿಚ್ಛೇದನವಾಗಿತ್ತು. ಇಬ್ಬರೂ ಜೀವನದಲ್ಲಿ ವಿಚ್ಛೇದನವಾದ ನಂತರ ಎರಡನೆಯ ಕೌಟುಂಬಿಕ ಜೀವನ ಆರಂಭಿಸಿದ್ದರು.
ಈ ನಡುವೆ ಪತಿರಾಯ ಎರಡನೇ ಪತ್ನಿಗೂ ಮೋಸ ಮಾಡಿ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಆ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಎರಡನೇ ಪತ್ನಿ ಈಗ ಜೀವ ಕಳೆದುಕೊಂಡಿದ್ದಾಳೆ.
ಪತಿಯು ಎರಡನೇ ಪತ್ನಿ ರಮ್ಯಾಗೂ ವಂಚನೆ ಮಾಡಿ ಬೆಂಗಳೂರಿನಲ್ಲಿ ಸಂಬಂಧಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಸುದ್ದಿಯು ಪತ್ನಿ ರಮ್ಯಾಗೆ ಗೊತ್ತಾಗಿದೆ.
ಬೆಂಗಳೂರಿನಲ್ಲಿ ಪತಿಯು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಈ ಘಟನೆ ಬಳಿಕ ಪತಿ ಮತ್ತು ಪತ್ನಿ ನಡುವೆ ಅನೈತಿಕ ಸಂಬಂಧ ವಿಚಾರವಾಗಿ ಪದೇ ಪದೇ ಜಗಳ ಶುರುವಾಗಿತ್ತು. ಮೊನ್ನೆ ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಚಾರಕ್ಕಾಗಿ ಗಲಾಟೆ ಶುರುವಾಗಿ, ಪತಿಯು ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಈತನೇ ಪೇಪರ್ ಟೌನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಪತ್ನಿಯ ಕೊಲೆ ಮಾಡಿರುವ ಮಾಹಿತಿಯನ್ನು ನೀಡಿದ್ದನು.


