ಚಿಕ್ಕಬಳ್ಳಾಪುರ: ಶಾಲಾ ಮುಖ್ಯ ಶಿಕ್ಷಕಿಯೊಬ್ಬರು ಹದಿಹರೆಯದ ವಿದ್ಯಾರ್ಥಿ ಜತೆ ರೊಮ್ಯಾಂಟಿಕ್ ಫೋಟೊಶೂಟ್ ಮಾಡಿಸಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಈ ವೇಳೆ ವಿದ್ಯಾರ್ಥಿ ಜೊತೆ ಮುಖ್ಯ ಶಿಕ್ಷಕಿ ಪುಷ್ಪಲತಾ ಎಂಬವರು ಕೆನ್ನೆಗೆ ಮುತ್ತು ಕೊಡುವಂತೆ, ಸೀರೆ ಸೆರಗು ಎಳೆಯುವಂತೆ ರೊಮ್ಯಾಂಟಿಕ್ ಫೋಟೊಶೂಟ್ ಮಾಡಿಸಿದ್ದಾರೆ. ಮುಖ್ಯ ಶಿಕ್ಷಕಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.


