ಬೆಳಗಾವಿ: ಎಣ್ಣೆ ಪಾರ್ಟಿ ಮಾಡಿ, ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸ್ನೇಹಿತ ಪ್ರದೀಪ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಕೋಲಕಾರ (25) ಕೊಲೆಯಾದ ಸ್ನೇಹಿತ. ಪ್ರದೀಪ ಆರೋಪಿಯಾಗಿದ್ದಾನೆ.
ಸ್ನೇಹಿತನ ಜತೆ ಹೊರ ಹೋದವನು ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆಯಾಗುವ ಮುನ್ನ ಪ್ರದೀಪ ಎಂಬ ಯುವಕನ ಜತೆ ಮೃತ ಮಂಜುನಾಥ ತಿರುಗಾಡುತ್ತಿದ್ದ. ಕೊಲೆಯಾದ ದಿನದಿಂದ ಈವರಗೂ ಪ್ರದೀಪ ಸುಳಿವು ಯಾರಿಗೂ ಸಿಕ್ಕಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆರೋಪಿ ಪ್ರದೀಪಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಪತ್ತೆ ಬಳಿಕ ಕೊಲೆಗೆ ನಿಖರ ಸತ್ಯಾಂಶ ತಿಳಿದು ಬರಲಿದೆ.


