ಬೆಂಗಳೂರು: ಸರಣಿ ಅಪಘಾತ ಮಾಡಿ ಅಪ್ರಾಪ್ತನ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಚಾಲಕ ಸುರೇಶ್(24) ಶಿಕ್ಷೆಗೆ ಗುರಿಯಾದವ.
2017ರ ಮೇ. 27ರಂದು ಬಾಬುಸಾಪಾಳ್ಯದಲ್ಲಿ ನಡೆದಿದ್ದ ಅಪಘಾತವು ಕಾರಿನಲ್ಲಿದ್ದ ಸುರೇಶ್ ನಿಂದ ಸರಣಿ ಅಪಘಾತವಾಗಿತ್ತು. ಇಬ್ಬರು ಬಾಲಕರಿಗೆ ಡಿಕ್ಕಿ ಹೊಡೆದಿದ್ದ.
ಇದರಿಂದ 12ವರ್ಷದ ಬಾಲಕ ಮೃತಪಟ್ಟು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿತ್ತು. ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಚಾಲಕನಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.


