ನಾವು ನೀವೆಲ್ಲಾ 4–5 ನೇ ತರಗತಿ ಯಲ್ಲಿ ಇರುವಾಗಲೇ ನಮ್ಮ ವಿಜ್ಞಾನ ಶಿಕ್ಷಕರು ಬೆಳಕು ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಎಂದು ಬೋಧಿಸಿರುವುದು ಸರಿಯಷ್ಟೆ. ಒಮ್ಮೆ ನೆನಪು ಮಾಡಿಕೊಳ್ಳಿ, ಹಾಗೆಯೇ ನಾವು ಬೆಳೆಯುತ್ತಾ ಕಾಲಾಂತರಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೆಲವು ವಿಜ್ಞಾನ ಲೇಖನಗಳ ಅಂಕಣಗಳನ್ನು ಓದಿರುತ್ತೀರಿ ಬೆಳಕಿನ ವೇಗದ ಬಗ್ಗೆ; ಅದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಎಂದು.
ಇದನ್ನು ವಿಜ್ಞಾನ ಹೇಳಿದ್ದು, ವಿಜ್ಞಾನಿಗಳ ಸತತ ಸಂಶೋಧನೆಯಿಂದ ಸಾಬೀತಾಗಿರುವ ಈ ನಿಯಮವನ್ನು ನಾವು ಒಪ್ಪಲೇ ಬೇಕು. ಹೀಗಿರುವಾಗ ನನ್ನ ಕಲ್ಪನೆ ಮೂಲಕ ಬಂದಿದ್ದ ಒಂದು ವಿಷಯವನ್ನು ಈಗ ಒಂದು ಆಲೋಚನೆ ಮೂಲಕ ವಿಮರ್ಷೆ ಮಾಡೋಣ…
ಅದು ಏನೆಂದರೆ ಉದಾಹರಣೆಗೆ ಒಂದು ಹಣತೆ ದೀಪ ಬೆಳಗಿಸೋಣ, ಒಂದು ಪುಟ್ಟ ಹಣತೆಯ ಮಂದಗತಿಯ ಬೆಳಕು ಅಂದರೆ ತೀಕ್ಷಣೆ ತೀರಾ ಕಡಿಮೆ ಇರುವ ಬೆಳಕು ಕೂಡ ಒಂದು ಸಕೆಂಡಿಗೆ 3 ಲಕ್ಷ ಕಿಲೋಮೀಟರ್ ಚಲಿಸಬಲ್ಲದೇ? ಹಾಗೆಯೇ ಒಂದು 1.5 ವೋಲ್ಟ್ ನಲ್ಲಿ ಬೆಳಗಬಲ್ಲ ಒಂದು LED ಹತ್ತಿಸೋಣ ಅದರ ಬೆಳಕು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಚಲಿಸಬಲ್ಲದೇ? ನಮ್ಮ ಸೂರ್ಯನಾದರೋ ಅತ್ಯಂತ ಪ್ರಖರ ಬೆಳಕು ಹೊರಸೂಸಿಸುವ ಒಂದು ಸಾಧಾರಣ ಮಧ್ಯಮ ವರ್ಗದ ನಕ್ಷತ್ರ,(ಬ್ರಮ್ಹಾಂಡದ ಅಸಂಖ್ಯಾತ ಬೃಹತ್ ನಕ್ಷತ್ರಗಳಿಗೆ ಹೋಲಿಕಿ ಮಾಡಿ ನೋಡಿದರೆ, ಅಂದರೆ; [ನಮ್ಮ ಸೌರ ಮಂಡಲವಿರುವ ಮಿಲ್ಕಿವೇ ಗೆಲಾಕ್ಷಿಯ (ವ್ಯಾಸ 1.2 ಬಿಲಿಯನ್ ಜ್ಯೋತಿರ್ಷಗಳು,)ನಮ್ಮ ಮಿಲ್ಕಿವೇ ಗೆಲಾಕ್ಸಿಯ ಹತ್ತಿರದಲ್ಲಿ ಇರುವ ಆಂಡ್ರೋಮಿಡ ಗೆಲಾಕ್ಸಿ (ವ್ಯಾಸ 2.2 ಬಿಲಿಯನ್ ಜ್ಯೋತಿರ್ಷಗಳು, ಇಂತಹ ಗೆಲಾಕ್ಸಿಗಳಲ್ಲಿ ಇರುವ ಬಿಲಿಯನ್ ಗಟ್ಟಲೇ ಇರುವ ಕೆಲವು ದೊಡ್ಡ ನಕ್ಷತ್ರಗಳ ಗಾತ್ರಗಳಿಗೆ ಹೋಲಿಕೆ ಮಾಡಿದರೆ )] ನಮ್ಮ ಸೂರ್ಯನ ಬೆಳಕು ಒಂದು ಸೆಕೆಂಡಿಗೆ 3 ಲಕ್ಷ ಕೊಲೋಮೀಟರ್ ದೂರ ಕ್ರಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಹೀಗೆ ಇರುವ ನಿಯಮದ ಆಧಾರದ ಮೇಲೆಯೇ ನಾನು ಮೇಲೆ ತಿಳಿಸಿದ ಪುಟ್ಟ ಹಣತೆ ಹಾಗು LED ಬೆಳಕು ಕೂಡ ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುವುದಾದರೆ ನಾವು 3 ಲಕ್ಷ ಕಿಲೋಮೀಟರ್ ದೂರದಲ್ಲಿ ನಿಂತು ನೋಡಿದಾಗ ಆ ಹಣತೆ ಅಥವಾ LED ಅತ್ಯಂತ ಕ್ಷೀಣ ಬಿಂದುವಾಗಿ ನಮ್ಮ ಕಣ್ಣಿಗೆ ಗೋಚರಿಸಬೇಕು ಅಲ್ಲವೇ?, ಆದರೆ ಗೋಚರಿಸುವುದೇ ಎಂಬುದು ಒಂದು ಸಣ್ಣ ಪ್ರಶ್ನೆ? ಇಲ್ಲಿ ಒಂದು ವಸ್ತು ನಮ್ಮ ಕಣ್ಣಿಗೆ ಹೇಗೆ ಗೋಚರಿಸುತ್ತದೆ ಎಂಬ ವಿಷಯದ ಬಗ್ಗೆ ವಿಜ್ಞಾನ ಏನು ಹೇಳಿದೆ ಎಂಬ ಬಗ್ಗೆ ನಮಗೆ ಒಂದು ಸಣ್ಣ ಅರಿವು ಇರಬೇಕು ಅಷ್ಟೆ.
ವಿಜ್ಞಾನದ ಪ್ರಕಾರ( ಅಥವಾ ನೀವೇ ಸ್ವಯಂ ಯೋಚಿಸಿದರೂ ಅಷ್ಟೇ) ಒಂದು ಬೆಳಕು ಒಂದು ವಸ್ತುವಿನ ಮೇಲೆ ಬಿದ್ದಾಗ ಆ ವಸ್ತುವಿನ ಮೇಲೆ ಬಿದ್ದ ಬೆಳಕಿನ ಪ್ರತಿಫಲಿತ ಬೆಳಕು ನಮ್ಮ ಕಣ್ಣು ತಲುಪಿದಾಗ ಆ ವಸ್ತು ನಮಗೆ ಗೋಚರಿಸುತ್ತದೆ ಎಂದು. ಇದರ ನಿಯಮದಂತೆ ಇಲ್ಲಿ ಹಣತೆ ಅಥವಾ LED ತಮ್ಮ ಮೇಲೆ ಯಾವುದೇ ಬೆಳಕು ಬೀಳದಿದ್ದರೂ, ತಮಗೆ ತಾವೇ ಸ್ವಯಂ ಪ್ರಕಾಶಿಸುತ್ತಿರುವಾಗ ಅವುಗಳು ಬೆಳಕಿನ ವೇಗದ ನಿಯಮದಂತೆ,3 ಲಕ್ಷ ಕಿಲೋ ಮೀಟರ್ ದೂರದಲ್ಲಿ ನಮಗೆ ಒಂದು ಸಣ್ಣ ಬೆಳಕಿನ ಬಿಂದುವಿನಂತೆಯಾದರೂ ಗೋಚರಿಸಬೇಕು ಎಂದಾಯ್ತು? ಅದರಂತೆ ಮಿಂಚು ಹುಳವೂ ಅಷ್ಟು ದೂರದಲ್ಲಿ ಕಾಣಿಸಬೇಕು ಅದು ಕೂಡ ಒಂದು ಬೆಳಕಿನ ಮೂಲ, ಆದರೆ ಯಾವುದೇ ಕಾರಣಕ್ಕೂ ಇವು ಯಾವುವೂ ಅಷ್ಟು ದೂರದಲ್ಲಿ ಗೋಚರಿಸುವುದಿಲ್ಲ, ಆದರೆ ಏಕೆ ಹೀಗೆ ಎಂದು ಯೋಚಿಸುವಾಗ, ತಿಳಿಯಬೇಕಾದ್ದು ನಾವು ಬೆಳಕಿನ ಉತ್ಪತ್ತಿಯ ಮೂಲದ ಶಕ್ತಿಯ ಸಾಮರ್ಥ್ಯದ ಬಗ್ಗೆ ಮೊದಲು ಯೋಚಿಸಬೇಕು, ಇಲ್ಲಿ ಇದೇ ಮುಖ್ಯವಾಗುತ್ತದೆ, ಹಣತೆಯು ಬೆಳಕಿನ ನಿಯಮದಂತೆ ಬೆಂಕಿಯ ಜ್ವಾಲೆಯ ಸಮೀಪದ ಆರಂಭದಲ್ಲಿ ಬೆಳಕು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುವ ವೇಗ ಹೊಂದಿದ್ದರೂ ಆ ಬೆಳಕನ್ನು ಉತ್ಪಾದಿಸುತ್ತಿರವ ಹಣತೆಯ ಬೆಂಕಿಯ ಜ್ವಾಲೆಯ ಸಾಮರ್ಥ್ಯ ಅತ್ಯಂತ ಮಂದವಾಗಿದೆ ಅಥವಾ ಕಡಿಮೆ ತೀಕ್ಷಣತೆ ಹೊಂದಿದೆ ಎಂದು ಇದರಂತೆ LED ಕೂಡ.
ಹಾಗಾಗಿ ಕೆಲವು ಮೀಟರ್ ಗಳಷ್ಟೇ ನಮಗೆ ಆ ಹಣತೆ, ಮಿಂಚು ಹುಳು ಅಥವಾ LED ಕಾಣಿಸಿ ನಾವು ಮತ್ತಷ್ಟು ದೂರ ಸರಿದಂತೆ ಅವು ನಮ್ಮ ಕಣ್ಣಿಗೆ ಕಾಣಿಸದಂತೆ ಆಗುತ್ತಿರಬಹುದು. ಇದಕ್ಕೆ ಬೆಳಕಿನ ಮಂದಗತಿ ಅಥವಾ ಕಡಿಮೆ ತೀಕ್ಷಣೆ ಕಾರಣ ಇರಬಹುದು, ಇದನ್ನು ನಾವು ನಂಬುವುದಾದರೆ, ನಮ್ಮ ಸೂರ್ಯನಿಗಿಂತ ನೂರಾರು ಪಟ್ಟು ಹೆಚ್ಚು ದೊಡ್ಡದಿದ್ದು ಅತ್ಯಾಧಿಕ ಹೆಚ್ಚು ಸಾಮರ್ಥ್ಯದಿಂದ ಬೆಳಕು ಸೂಸುತ್ತಿರುವ ನಕ್ಷತ್ರವು ಹೊರದಬ್ಬುವ ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಗಳಿಗಿಂತ ಇನ್ನು ಜಾಸ್ತಿ ಇರಬಹುದೇ? ಇದು ಪ್ರಶ್ನಿಸಲಾಗದ ಪ್ರಶ್ನೆ? ಏನಂತೀರಾ?
ಪರಿಕಲ್ಪನೆ: ವೇಣುಗೋಪಾಲ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC