ಚಿಕ್ಕಮಗಳೂರು: ರಾಜ್ಯದಲ್ಲಿ ಸಾಮಾಜಿಕ–ಶೈಕ್ಷಣಿಕ ಸರ್ವೆ ಹಿನ್ನೆಲೆ ಸರ್ವೆಗೆ ಹೋದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಕೃಷ್ಣಪ್ಪ (54) ನಾಯಿ ದಾಳಿಗೆ ಒಳಗಾದ ಶಿಕ್ಷಕರಾಗಿದ್ದಾರೆ. ಬೀದಿನಾಯಿ ಕಾಲಿನ ಭಾಗಕ್ಕೆ ಕಡಿದಿದೆ. ಸುಮಾರು ಒಂದು ಇಂಚು ಆಳಕ್ಕೆ ಬೀದಿ ನಾಯಿ ಹಲ್ಲು ನಾಟಿತ್ತು.
ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮಕ್ಕೆ ಸರ್ವೆಗೆ ಹೋದಾಗ ಘಟನೆ ನಡೆದಿದೆ. ಗಾಯಾಳು ಕೃಷ್ಣಪ್ಪಗೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹಲವು ಮನೆಗಳಲ್ಲಿ U.H.I.D. ನಂಬರ್ ಪಂಡಿಂಗ್ ತೋರಿಸುತ್ತಿದೆ. ಮೀಟರ್ ಬೋರ್ಡಿನ ಆರ್.ಆರ್. ನಂಬರ್ ತರಲು ಹೋದಾಗ ನಾಯಿ ದಾಳಿ ನಡೆಸಿದೆ. ಸರ್ವೇಯಲ್ಲಿನ ತಾಂತ್ರಿಕ ದೋಷದ ಹಿನ್ನೆಲೆ ಸರ್ಕಾರದ ವಿರುದ್ದ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


