nammatumakuru

    Subscribe to Updates

    Get the latest creative news from FooBar about art, design and business.

    What's Hot

    ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ; ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ

    March 2, 2026

    ಇಸ್ರೇಲ್–ಇರಾನ್ ಯುದ್ಧ: ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಎಲ್ಲಾ ರೀತಿಯ ಪ್ರಯತ್ನ: ಡಿಸಿಎಂ ಡಿ.ಕೆ. ಶಿವಕುಮಾರ್

    March 2, 2026

    ಶ್ರೀಮಂತರು ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡಲಿ: ಸಚಿವ ಎಂ.ಬಿ. ಪಾಟೀಲ್ ಕರೆ

    March 2, 2026
    Facebook Twitter Instagram
    ಟ್ರೆಂಡಿಂಗ್
    • ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ; ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ
    • ಇಸ್ರೇಲ್–ಇರಾನ್ ಯುದ್ಧ: ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಎಲ್ಲಾ ರೀತಿಯ ಪ್ರಯತ್ನ: ಡಿಸಿಎಂ ಡಿ.ಕೆ. ಶಿವಕುಮಾರ್
    • ಶ್ರೀಮಂತರು ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡಲಿ: ಸಚಿವ ಎಂ.ಬಿ. ಪಾಟೀಲ್ ಕರೆ
    • ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಜಾಗೃತಿ ಮ್ಯಾರಾಥಾನ್: ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್
    • ರಾಷ್ಟ್ರಮಟ್ಟದ ಯೋಗ: ತೀರ್ಪುಗಾರರಾಗಿ ಸಂದೀಪ ಸಾದುರೆ ಆಯ್ಕೆ
    • ಮೇಲ್ವರ್ಗ–ಕೆಳವರ್ಗ ಪದ ಬಳಕೆಯೇ ಸರಿ ಇಲ್ಲ: ಶಾಸಕ ಕೆ.ಎನ್.ರಾಜಣ್ಣ
    • ಬಳ್ಳಾರಿ:  ಮಧ್ಯಪ್ರಾಚ್ಯ ದೇಶಗಳಲ್ಲಿನ ಬಿಕ್ಕಟ್ಟು — ಬಳ್ಳಾರಿ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ
    • ಗ್ಯಾರಂಟಿ ಯೋಜನೆ ಎಷ್ಟೇ ಹೊರೆಯಾದರೂ ಮುಂದುವರಿಯಬೇಕು: ಡಿ.ಕೆ.ಸುರೇಶ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಯುವತಿಯರಿಗೆ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ: ‘ರಾಹ್‌ ಸೂಪರ್ 30’ ಗೆ ಚಾಲನೆ
    ರಾಜ್ಯ ಸುದ್ದಿ November 12, 2023

    ಯುವತಿಯರಿಗೆ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ: ‘ರಾಹ್‌ ಸೂಪರ್ 30’ ಗೆ ಚಾಲನೆ

    By adminNovember 12, 2023No Comments2 Mins Read
    rah super 30

    ಬೆಂಗಳೂರು: ನಾಗರಿಕ ಸೇವಾ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಲು ಬಯಸುವ ಅವಕಾಶ ವಂಚಿತ ಪ್ರತಿಭಾನ್ವಿತ ಯುವತಿಯರಿಗೆ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರಕ್ಕೆ ಪ್ರವೇಶ ಪಡೆಯುವ  ‘ರಾಹ್ ಸೂಪರ್‌ 30’ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಶಿಕ್ಷಣ ದಿನದಂದು ಚಾಲನೆ ದೊರೆತಿದೆ.

    ‘ರಾಹ್‌ ಅಕಾಡೆಮಿ’ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ರಾಜ್ಯದ 30 ಪ್ರತಿಭಾನ್ವಿತ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜತೆಗೆ, ಗ್ರಂಥಾಲಯದ ವ್ಯವಸ್ಥೆ, ಪರಿಣಿತರ ಮಾರ್ಗದರ್ಶನ ಸೇರಿದಂತೆ ಅಧ್ಯಯನಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು.


    Provided by
    Provided by

    ಪದವಿ ಪೂರ್ಣಗೊಳಿಸಿರುವ ಪ್ರತಿಭಾನ್ವಿತ ಯುವತಿಯರು ವೆಬ್‌ಸೈಟ್‌  https://raahsuper30.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಹಲವು ಸುತ್ತಿನ ಪರೀಕ್ಷೆ ನಂತರ ಕಾರ್ಯಕ್ರಮಕ್ಕೆ ಆಯ್ದ 30 ಅಭ್ಯರ್ಥಿಗಳನ್ನು ಸೇರ್ಪಡೆಗೊಳಿಸಲಾಗುವುದು.

    “ಭಾರತದ ಮೊದಲ ಶಿಕ್ಷಣ ಸಚಿವ, ಭಾರತ ರತ್ನ ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಜನ್ಮದಿನವಾದ ನವೆಂಬರ್ 11 ರಂದು ಆಚರಿಸಲಾಗುವ  ‘ರಾಷ್ಟ್ರೀಯ ಶಿಕ್ಷಣ ದಿನ’ದಂದು ‘ರಾಹ್‌ ಸೂಪರ್‌ 30’ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಅಜಾದ್ ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ’ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೆ ತಂದು, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ದೇಶದಲ್ಲಿಂದು ಸಾಕ್ಷರರ ಸಂಖ್ಯೆ ಹೆಚ್ಚಿ, ಶಿಕ್ಷಣ ಕ್ಷೇತ್ರದಲ್ಲಿ ನಾವು ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಅವರ ಹಾದಿಯಲ್ಲಿ ನಾವು ಇಂದು ಸಣ್ಣ ಹೆಜ್ಜೆ ಇಟ್ಟಿದ್ದೇವೆ,”ಎಂದು ರಾಹ್‌ ಸಂಸ್ಥೆಯ ಟ್ರಸ್ಟಿ ಹುಸೇನ್ ಪ್ರಕಟಣೆಯಲ್ಲಿ ಕೋರಿದ್ದಾರೆ.

    “ಐಎಎಸ್‌, ಐಪಿಎಎಸ್, ಕೆಎಎಎಸ್‌  ಅಧಿಕಾರಿಯಾಗುವ ಕನಸು ಹೊತ್ತ ಎಲ್ಲ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಸುಲಭದ ಮಾತಲ್ಲ. ಹಣಕಾಸಿನ ಅಡಚಣೆ, ಸಾಮಾಜಿಕ ಕಟ್ಟುಪಾಡು, ಮಾರ್ಗದರ್ಶನದ ಕೊರತೆಯಿಂದಾಗಿ ಮರೆಯಲ್ಲೇ ಉಳಿದು ಬಿಡುತ್ತಾರೆ. ಅಂತಹ ಹೆಣ್ಣು ಮಕ್ಕಳಿಗೆ ಪುಸ್ತಕ ಕೊಟ್ಟರಷ್ಟೇ ಸಾಲದು. ಅಧ್ಯಯನಕ್ಕೆ ಪೂರಕ ವಾತಾರವಣವೂ ಬೇಕು. ಅದಕ್ಕಾಗಿಯೇ ಈ ಕಾರ್ಯಕ್ರಮ ರೂಪಿಸಿದ್ದೇವೆ. ಈ ಸಂಬಂಧ ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿ ಲಭ್ಯವಿದ್ದು, ಅರ್ಹ ಯುವತಿಯರು ಇದರ ಸದುಪಯೋಗ ಪಡದುಕೊಳ್ಳಬೇಕು,”ಎಂದಿದ್ದಾರೆ.

    “ಶಿಕ್ಷಣದಲ್ಲಿ ಲಿಂಗ ಸಮಾನತೆ ಇಂದಿನ ಅಗತ್ಯ. ಸ್ವಾತಂತ್ರ್ಯದ ನಂತರ ನಮ್ಮ ರಾಷ್ಟ್ರದ ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ, ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಲಿಂಗ ಸಮಾನತೆಯನ್ನು ಸಾಧಿಸಲಾಗಿಲ್ಲ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ರಾಹ್ ಸೂಪರ್ 30’ ಉಚಿತ ವಸತಿ, ಅಧ್ಯಯನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ,” ಎಂದು  ಎಸ್‌.ಎ. ಹುಸೇನ್‌ ಹೇಳಿದ್ದಾರೆ.

    “ಸಮಾಜ ಮತ್ತು ಸಮುದಾಯದ ಕಲ್ಯಾಣದಲ್ಲಿ ಮಹಿಳೆಯರ ಶಿಕ್ಷಣವು ಬಹಳ ಮುಖ್ಯವಾದ ಹೆಜ್ಜೆ. ಮಹಿಳೆಯರು ಸಮಾನ ಪಾತ್ರ ನಿರ್ವಹಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ, ಇದನ್ನು ಶಿಕ್ಷಣದಿಂದ ಮಾತ್ರ ಸಾಧಿಸಬಹುದು,”ಎಂದು ರಾಹ್‌ ಅಕಾಡೆಮಿಯ ಅಧ್ಯಕ್ಷರಾದ ರೆಹಾನಾ ಶಮೀಮ್‌ ತಿಳಿಸಿದ್ದಾರೆ.

    ಕಾರ್ಯಕ್ರಮದ ವಿವರ:

    -ಪದವಿ ನಂತರದ ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಪ್ರತಿ ವರ್ಷ 30 ಯುವತಿಯರಿಗೆ ಮಾತ್ರ ಅವಕಾಶ

    -ಆಯ್ದ ವಿದ್ಯಾರ್ಥಿನಿಯರಿಗೆ 12 ತಿಂಗಳ (1 ವರ್ಷ) ಉಚಿತ ವಸತಿ, ಅಧ್ಯಯನಕ್ಕೆ ನೆರವು

    -ಗ್ರಂಥಾಲಯ, ವಸತಿ ನಿಲಯ ಜತೆಗೆ ಪರಿಣಿತರು, ಹಿರಿಯ ಅಧಿಕಾರಿಗಳು, ವಿಷಯ ತಜ್ಞರಿಂದ ಮಾರ್ಗದರ್ಶನ

    admin
    • Website

    Related Posts

    ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ; ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ

    March 2, 2026

    ಇಸ್ರೇಲ್–ಇರಾನ್ ಯುದ್ಧ: ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಎಲ್ಲಾ ರೀತಿಯ ಪ್ರಯತ್ನ: ಡಿಸಿಎಂ ಡಿ.ಕೆ. ಶಿವಕುಮಾರ್

    March 2, 2026

    ಶ್ರೀಮಂತರು ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡಲಿ: ಸಚಿವ ಎಂ.ಬಿ. ಪಾಟೀಲ್ ಕರೆ

    March 2, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ; ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ

    March 2, 2026

    ಶಿವಮೊಗ್ಗ: ಇರಾನ್‌ ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದೇ…

    ಇಸ್ರೇಲ್–ಇರಾನ್ ಯುದ್ಧ: ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಎಲ್ಲಾ ರೀತಿಯ ಪ್ರಯತ್ನ: ಡಿಸಿಎಂ ಡಿ.ಕೆ. ಶಿವಕುಮಾರ್

    March 2, 2026

    ಶ್ರೀಮಂತರು ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡಲಿ: ಸಚಿವ ಎಂ.ಬಿ. ಪಾಟೀಲ್ ಕರೆ

    March 2, 2026

    ಮಾದಕ ವ್ಯಸನ ಮುಕ್ತ ಸಮಾಜಕ್ಕೆ ಜಾಗೃತಿ ಮ್ಯಾರಾಥಾನ್: ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್

    March 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.