ತುಮಕೂರು: ಸರ್ಕಾರದ ಆದೇಶದಂತೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರಿಗೆ ಧರ್ಮದ ಹೆಸರಿನಲ್ಲಿ ಅವಮಾನಿಸಿ, ಸಮೀಕ್ಷೆಗೆ ಅವಕಾಶ ನೀಡದೇ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಸ್ಲಿಂ ಸಮುದಾಯದ ಶಿಕ್ಷಕಿ ಎಂಬ ಕಾರಣಕ್ಕೆ ಸಮೀಕ್ಷೆಗೆ ಅವಕಾಶ ನೀಡದೆ ಗಲಾಟೆ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಮುಸ್ಲಿಂ ಆಗಿ ಸಮೀಕ್ಷೆಗೆ ಹೇಗೆ ಮನೆ ಬಳಿ ಬಂದಿದ್ದೀಯಾ? ಸಮೀಕ್ಷೆ ಮಾಡಲು ನೀನು ಯಾರು? ಮುಸ್ಲಿಮರ ಮನೆ ಹತ್ತಿರ ಬಿಟ್ಟುಕೊಳ್ಳಬಾರದು. ಮನೆ ಬಳಿಗೆ ಏಕೆ ಬರುತ್ತೀರಾ? ಸಮೀಕ್ಷೆಗೆ ಬರುವಾಗ ಗುರುತಿನ ಕಾರ್ಡ್ ಏಕೆ ತಂದಿಲ್ಲ? ಎಂದೆಲ್ಲ ಪ್ರಶ್ನಿಸಿ ಶಿಕ್ಷಕಿಯನ್ನು ಅವಮಾನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ನಮ್ಮಮನೆ ಸಮೀಪದಲ್ಲೇ ಇದ್ದು, ಐ.ಡಿ ಕಾರ್ಡ್ ತರುತ್ತೇನೆ. ಸಮೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಶಿಕ್ಷಕಿ ಮನವೊಲಿಸಲು ಮುಂದಾದರೂ, ಅವಕಾಶ ನೀಡದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕಿ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿರುವ ಮಾಹಿತಿ ಲಭ್ಯವಾಗಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC