ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಸಂಚಲನ ಮೂಡಿಸುತ್ತಿದೆ.
ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡ ಈ ಪ್ರಕರಣದಲ್ಲಿ ಇಬ್ಬರು ನಕಲಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ನೀರಜ್ ಅಗರ್ವಾಲ್ ಎಂಬ ವೈದ್ಯರು ಗ್ರೇಟರ್ ಕೈಲಾಶ್‌ನಲ್ಲಿ ಅಗರ್ವಾಲ್ ವೈದ್ಯಕೀಯ ಕೇಂದ್ರವನ್ನು ನಡೆಸುತ್ತಿದ್ದಾರೆ.
ನೀರಜ್ ಅವರು ಮಾಜಿ ಲ್ಯಾಬ್ ಟೆಕ್ನಿಷಿಯನ್ ಮಹೇಂದರ್ ಅವರ ಸಹಾಯದಿಂದ ಅಕ್ರಮವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.


