ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದು 25 ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್ ನ ಈಶಾನ್ಯ ರಾಜ್ಯ ಬಹಿಯಾದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಸಾವೊ ಜೋಸ್ ಡೊ ಜಕುಪೆ ನಗರದ ಸಮೀಪ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಬಹಿಯಾದ ಉತ್ತರ ಕರಾವಳಿಯಲ್ಲಿರುವ ಪ್ರವಾಸಿ ತಾಣವಾದ ಗೌರಾಜೂಬಾ ಬೀಚ್ ಗೆ ಭೇಟಿ ನೀಡಿದ ನಂತರ ಮಿನಿಬಸ್ ಜಾಕೋಬಿನಾ ನಗರಕ್ಕೆ ಹಿಂತಿರುಗುತ್ತಿತ್ತು ಎಂದು ವರದಿ ಮಾಡಿದೆ. ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಫೆಡರಲ್ ಹೈವೇ ಪೊಲೀಸರನ್ನು ಉಲ್ಲೇಖಿಸಿ ಬ್ರೆಜಿಲಿಯನ್ ಮಾಧ್ಯಮಗಳು, ವಾಹನಗಳಲ್ಲಿ ಒಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರಬಹುದು ಎಂದು ವರದಿ ಮಾಡುತ್ತಿದೆ, ಆದರೆ ಇದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಘಟನೆಯಲ್ಲಿ ಜಾಕೋಬಿನಾ ಮೇಯರ್ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದರು.


