ಅಮೆರಿಕದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆ ಲಾರೆನ್ ಕೆನಡೆ 24 ನಿಮಿಷಗಳ ನಂತರ ಮತ್ತೆ ಬದುಕಿ ಬಂದಿದ್ದಾರೆ. ಸಾವಿನ ನಂತರ ಅಪಾರವಾದ ಶಾಂತಿಯನ್ನು ಪಡೆದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಗೆ ಹೃದಯಾಘಾತವಾದ ಬಳಿಕ ಆಕೆಯ ಪತಿ 911 ಗೆ ಕರೆ ಮಾಡಿ ಸಿಪಿಆರ್ ನೀಡಿದರು. ಬಳಿಕ ಅಲ್ಲಿಗೆ ಬಂದ ವೈದ್ಯರು ಮಹಿಳೆ ಸತ್ತಿದ್ದಾರೆ ಎಂದು ಘೋಷಿಸಿದರು. ಆದರೆ ಮಹಿಳೆ 24 ನಿಮಿಷಗಳ ನಂತರ ಮತ್ತೆ ಉಸಿರಾಟ ಆರಂಭಿಸಿರುವುದು ಅಚ್ಚರಿ ಮೂಡಿಸಿದೆ.


