ಶಕ್ತಿ ಯೋಜನೆಯಡಿ ಮಹಿಳೆಯೊಬ್ಬರು ವೇಗಧೂತ ಸಾರಿಗೆ ಬಸ್ ಏರಿ ಗಲಾಟೆ ಮಾಡಿಕೊಂಡಿದ್ದರು. ನಿಲುಗಡೆ ಕೊಡಲಿಲ್ಲ ಎಂಬ ಕಾರಣಕ್ಕೆ ಬಸ್ ನಿರ್ವಾಹಕ ಮೇಲೆ ಮಹಿಳೆಯ ಕಡೆಯವರು ಹಲ್ಲೆ ಮಾಡಿದ್ದರು. ಸದ್ಯ ಮಹಿಳೆ ಸೇರಿದಂತೆ ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರಿಗೆ ಹೋಗಲು ಮಹಿಳೆಯೊಬ್ಬರು ಚಳ್ಳಕೆರೆ ಡಿಪೋಗೆ ಸೇರಿದ ರಾಯದುರ್ಗ- ಬೆಂಗಳೂರು ಬಸ್ ಏರಿದ್ದರು. ಮಹಿಳೆ ದಾಬಸ್ ಪೇಟೆಗೆ ನಿಲುಗಡೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಈ ಬಸ್ ವೇಗಧೂತ ಬಸ್ ಆಗಿದ್ದರಿಂದ ಅವರು ಕೇಳಿದ ದಾಬಾಸ್ ಪೇಟೆಯಲ್ಲಿ ನಿಲುಗಡೆ ನೀಡಲು ಸಾಧ್ಯವಾಗಿಲ್ಲ. ಇದಾದ ಬಳಿಕ ಬೆಂಗಳೂರು ತಲುಪಿ ಬಸ್ ಕಂಡಕ್ಟರ್ ಜೊತೆ ಮಹಿಳೆ ಚಂದ್ರಿಕಾ ವಾಗ್ವಾದ ನಡೆಸಿದ್ದಳು. ಇಷ್ಟಕ್ಕೆ ಸುಮ್ಮನಾಗದೇ ಮಹಿಳೆಯ ಕಡೆಯವರಾದ ಮಲ್ಲಿಕಾರ್ಜುನ್, ಶಿವರಾಜ್, ನವೀನ್ ಅವರು ಬಂದು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದರು. ಈ ಸಂಬಂಧ ಪ್ರಕಟಣ ದಾಖಲಾಗಿದ್ದು, ಗುರುವಾರ ಮಹಿಳೆ ಸೇರಿ ಹಲ್ಲೆ ಮಾಡಿದವರನ್ನು ಬಂಧಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


