ವೈ.ಎನ್.ಹೊಸಕೋಟೆ: ಹಣಕಾಸಿನ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳದಿಂದ ಮಹಿಳೆಯ ಪ್ರಾಣಕ್ಕೆ ಕುತ್ತು ತಂದ ಘಟನೆ ಹೋಬಳಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹನುಮಕ್ಕ (45) ಎಂಬಾಕೆ ತನ್ನ ಗಂಡ ಕಾಣೆಯಾಗಿದ್ದು, ಅಂದಿನಿಂದ ಚಿಕ್ಕಹಳ್ಳಿಯಲ್ಲಿ ಇಂದ್ರಬೆಟ್ಟ ಗ್ರಾಮದ ಚನ್ನಕೇಶವ (55) ಎಂಬುವರ ಜೊತೆ ವಾಸಿಸುತ್ತಿದ್ದರು. ಬುಧವಾರ ಸಂಜೆ ಇವರಿಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ತಲೆಗೆ ಬಿದ್ದಿರುವ ಕಟ್ಟಿಗೆ ಏಟಿನಿಂದ ಹನುಮಕ್ಕ ಸ್ಥಳದಲ್ಲೇ ಮರಣ ಹೊಂದಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಕೊಲೆ ಆರೋಪಿ ಸೆರೆಗೆ ಕ್ರಮಕೈಗೊಳ್ಳಲಾಗಿದೆ.
ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ.
ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC


