“ನನ್ನನ್ನು ಮತ್ತು ನನ್ನ ಮಕ್ಕಳನ್ನು ಪತಿ ಮನೆಯಿಂದ ಹೊರ ಹಾಕಿದ್ದು, ನನಗೆ ಜೀವ ಬೆದರಿಕೆಯಿದೆ. ಆತ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು” ಎಂದು ಆರೋಪಿಸಿ ಮಹಿಳೆಯೊಬ್ಬರು ಮಕ್ಕಳ ಸಹಿತ ವಿಡಿಯೋ ಮಾಡಿ ರಕ್ಷಣೆ ಕೋರಿದ್ದಾರೆ.
ಸಂಬಂಧ ಹೈದರಾಬಾದ್ ಮೂಲದ ಪೂಜಾ ಗಾಂಧಿ ಎಂಬುವವರು ಪತಿ ವೈಭವ್ ಜೈನ್ ಮತ್ತು ಗೀತಿಕಾ ಬಿಂದನಂ, ರೋಹನ್ ಸಾಲ್ಯಾನ್ ಎಂಬುವವರಿಂದ ಪ್ರಾಣ ಬೆದರಿಕೆ ಇದೆ ಎಂದು ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊತ್ತನೂರು ನಿವಾಸಿ ಪೂಜಾ ಗಾಂಧಿ ಎಂಬುವವರು ಈ ವಿಡಿಯೋ ಮಾಡಿದ್ದಾರೆ. ಪತಿ ವೈಭವ್ ಜೈನ್, ಗೀತಿಕಾ ಬಿಂದನಂ, ರೋಹನ್ ಸಾಲ್ಯಾನ್ ಅವರಿಂದ ನನಗೆ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ ಎಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಪೂಜಾ ಗಾಂಧಿ ಸಹೋದರ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಹೋದರಿಯ ಸೆಲ್ಫಿ ವಿಡಿಯೋ ಹಂಚಿಕೊಂಡು, ಮುಖ್ಯಮಂತ್ರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ. ಸಹೋದರಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.


