ಪಶ್ಚಿಮ ಬಂಗಾಳ ಮೂಲದ ತಾಯಿಯೊಬ್ಬರು ಜಾರ್ಖಂಡ್ ನ ಜೆಮ್ ಶೆಡ್ ಪುರದಲ್ಲಿ ತನ್ನ ನವಜಾತ ಶಿಶುವನ್ನು 6 ಸಾವಿರ ರೂ.ಗೆ ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಮಗುವನ್ನು ಖರೀದಿಸುವ ನಾಟಕವಾಡಿದ ವ್ಯಕ್ತಿಯೊಬ್ಬರು ಆ ಮಗುವನ್ನು ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದಾರೆ.
ಬಳಿಕ ಆ ತಾಯಿಯನ್ನು ಬಂಧಿಸಲಾಗಿದೆ. ಹಣದಾಸೆಗೆ ಹೆತ್ತ ಕೂಡಲೇ ಮಗುವನ್ನು ಬೇರೆಯವರಿಗೆ ಮಾರಲು ಹೊರಟಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮೆಡ್ ಪುರ ಎಸ್‌ಡಿಒ ಪಿಯೂಷ್ ಮಿಶ್ರಾ ಹೇಳಿದ್ದಾರೆ.


