ಉತ್ತರ ಪ್ರದೇಶದಲ್ಲಿ ಹಲವು ಯುವಕರನ್ನು ಮದುವೆಯಾಗಿ ಅವರಿಂದ ಬೆಲೆಬಾಳುವ ವಸ್ತುಗಳನ್ನು ಪಡೆದು ಪರಾರಿಯಾಗುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದು, ಬಂಧನದ ಬಳಿವೂ ಈ ಮಹಿಳೆ ಈಕೆಯ ಮೋಸದ ವಿವಾಹದಿಂದ ವಂಚನೆಗೊಳಗಾದವರಿಗೆ ಶಾಕ್ ನೀಡಿದ್ದಾಳೆ.
ಬಂಧನಕ್ಕೊಳಗಾಗಿದ್ದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಇನ್ನೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಬಂಧಿತ ಮಹಿಳೆ ಎಚ್ ಐವಿ ಪಾಸಿಟಿವ್ ಆಗಿದ್ದು, ಈಕೆಯನ್ನು ವಿವಾಹವಾಗಿ ದೈಹಿಕ ಸಂಬಂಧ ಹೊಂದಿದವರು ಇದೀಗ ಆತಂಕದಲ್ಲಿದ್ದಾರೆ.
ಮಹಿಳೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಲವರನ್ನು ಈ ಮಹಿಳೆ ಬಲೆಗೆ ಕೆಡವಿದ್ದಾಳೆ. ಯುವತಿ ಮದುವೆಯಾಗುವುದಾಗಿ ಭರವಸೆ ನೀಡಿ ಯುವಕರಿಂದ ಬೆಲೆಬಾಳುವ ವಸ್ತುಗಳು ಹಾಗೂ ಹಣ ವಸೂಲಿ ಮಾಡುತ್ತಿದ್ದರು. ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ಯುವತಿ ಈ ಕೃತ್ಯ ಎಸಗುತ್ತಿದ್ದಳು. ಈಕೆಯ ಜೊತೆಗೆ ಸಂಬಂಧಿಕರು ಎಂದು ಪರಿಚಯಿಸಿಕೊಳ್ಳುವ ಕೆಲವರು ಜೊತೆಗಿದ್ದರು.
ಮಹಿಳೆಗೆ ಎಚ್ ಐವಿ ಪಾಸಿಟಿವ್ ಕಂಡು ಬಂದ ಕೂಡಲೇ ಉತ್ತರ ಪ್ರದೇಶದ ಆರೋಗ್ಯ ಇಲಾಖೆ ವಂಚನೆಗೊಳಗಾದ ಯುವಕನನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಸದ್ಯ ಮಹಿಳೆಗೆ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಯುವತಿಯ ತಾಯಿಯನ್ನು ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಮಹಿಳೆಯಿಂದ ವಂಚನೆಗೊಳಗಾದ ಮೂವರು ಯುವಕರು ಎಚ್ ಐವಿ ಪಾಸಿಟಿವ್ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA