ಬೆಂಗಳೂರು: ಗೃಹಿಣಿ ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ನ ಶ್ರೀ ಕಂಠೇಶ್ವರ ನಗರದಲ್ಲಿ ನಡೆದಿದೆ. ಪ್ರೇಮಲತಾ(35) ಮೃತ ಮಹಿಳೆಯಾಗಿದ್ದಾಳೆ.
ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪತಿ ಶಿವಶಂಕರ್ ಕೊಲೆ ಮಾಡಿರಬಹುದು ಎಂಬ ಆನುಮಾನವಿದೆ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ನೇಣು ಬಿಗಿಯಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯ ಗಂಡನೇ ಕೊಲೆ ಮಾಡಿ ನೇಣು ಬಿಗಿದಿರಬಹುದು ಎಂಬ ಶಂಕೆಯನ್ನು ಪ್ರೇಮಲತಾ ಸಂಬಂಧಿಕರು ವ್ಯಕ್ತಪಡಿಸಿದ್ದಾರೆ.


