ಪ್ರಾಚೀನ ಸಂಪತ್ತು ಪಾಕಿಸ್ತಾನದಲ್ಲಿ ಕಂಡು ಬಂದಿದೆ. ಬರೋಬ್ಬರಿ 2,000 ವರ್ಷಗಳಷ್ಟು ಹಳೆಯದಾದ ನಾಣ್ಯಗಳನ್ನು ಒಳಗೊಂಡಿರುವ ಅತ್ಯಂತ ಅಪರೂಪದ ನಿಧಿ ಇದಾಗಿದೆ. ಈ ನಿಧಿಯಲ್ಲಿನ ಅನೇಕ ನಾಣ್ಯಗಳು ತಾಮ್ರದಿಂದ ಮಾಡಲ್ಪಟ್ಟಿದೆ.
ಇದು ಬೌದ್ಧ ದೇವಾಲಯಗಳ ಗೋರಿಗಳಲ್ಲಿ ಕಂಡು ಬಂದಿದೆ. ಮಧ್ಯ ಆಗ್ನೆಯ ಪಾಕಿಸ್ತಾನದಲ್ಲಿ ಕ್ರಿ.ಪೂ. 2600 ರ ಮೊಹೆಂಜೋದಾರೋ ಕಾಲದ ಬೃಹತ್ ರಚನೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.


