ಬೆಂಗಳೂರು: ಸಿಲಿಕಾನ್ ಸಿಟಿಯ ಮಸೀದಿಯಲ್ಲಿ ನಿಯಮಾವಳಿಗಳ ನ್ನು ಮಸೀದಿ ಪಾಲಿಸುತ್ತಿಲ್ಲ ಎಂದು ಯುವಕನೊಬ್ಬ ದೂರು ನೀಡಿರುವ ಘಟನೆ ನಡೆದಿದೆ. ದಿನಕ್ಕೆ ಐದು ಬಾರಿ ಕೂಗುವ ಅಜಾನ್ ಸದ್ದಿನಿಂದಾಗಿ ಬಹಳ ಕಿರಿಕಿರಿ ಆಗುತ್ತಿದೆಯೆಂದು, ಅಭಿಷೇಕ್ ಎಂಬ ಯುವಕ ಸಂಜಯ ನಗರ ಮಸೀದಿಯ ವಿರುದ್ದ ಸಾಮಾಜಿಕ ಜಾಲತಾಣದ ಮೂಲಕ ದೂರು ದಾಖಲಿಸಿದ್ದಾರೆ.
ಶಬ್ದ ವರ್ಧಕಗಳಿಗೆ ನಿಗದಿತ ಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಆದರೆ ಈ ಮಸೀದಿ ಅದಕ್ಕಿಂತ ಮೂರು ಪಟ್ಟು ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಭಿಷೇಕ್ ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.


