ಭೋಪಾಲ್: 3 ಈಡಿಯೆಟ್ಸ್ ಸಿನಿಮಾದ ದೃಶ್ಯದ ಮಾದರಿಯಂತೆ ಯುವಕನೋರ್ವ ತನ್ನ ತಾತನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಎಮರ್ಜೆನ್ಸಿ ವಾರ್ಡ್ ಗೆ ಬೈಕ್ ನುಗ್ಗಿಸಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ.
ಭೋಪಾಲ್ ನ ತಿಕುರಿಯಾ ತೊಲಾ ನಿವಾಸಿ ದೀಪಕ್ ಗುಪ್ತಾ ಎಂಬವರಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ನಿತ್ರಾಣಗೊಂಡಿದ್ದ ಅವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ನೇರವಾಗಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಆ್ಯಂಬುಲೆನ್ಸ್ ಗೆ ಕಾಯುವಷ್ಟು ಸಮಯವಿಲ್ಲದ ಕಾರಣ ಯುವಕ ಬೈಕ್ ನಲ್ಲೇ ತಾತನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆತಂದಿದ್ದಾರೆ.
ಈ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ವ್ಯಕ್ತಿ ಬೈಕ್ ನಲ್ಲಿ ನೇರವಾಗಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಗೆ ಹೋಗುತ್ತಾನೆ. 3 ಈಡಿಯೆಟ್ಸ್ ಸಿನಿಮಾದ ದೃಶ್ಯವನ್ನು ಮರುಸೃಷ್ಟಿ ಮಾಡಿದಂತಾಗಿದೆ.


