ಯುವಕನೊಬ್ಬ ತೃತೀಯಲಿಂಗಿಯೊಬ್ಬಳನ್ನು ಮದುವೆಯಾಗಿರುವ ಘಟನೆ ತೆಲಂಗಾಣ ಖಮ್ಮಂ ಜಿಲ್ಲೆಯ ಎಂಕೂರಿನಲ್ಲಿ ನಡೆದಿದೆ. ಎನ್ನೂರಿನ ತೃತೀಯಲಿಂಗಿ ನಕ್ಷತ್ರ ಮತ್ತು ಆಂಧ್ರದ ಎನ್ ಟಿಆರ್ ಜಿಲ್ಲೆಯ ವಿಸ್ಸನ್ನಪೇಟೆಯ ಯುವಕ ನಂದು ಇನ್ ಸ್ಟಾ ಪರಿಚಯವಾಗಿ, ಇದು ಪ್ರೀತಿಗೆ ತಿರುಗಿತ್ತು.
ಈ ವಿಷಯವನ್ನು ತೃತೀಯಲಿಂಗಿ ಸಮುದಾಯದವರಿಗೆ ತಿಳಿಸಿದಾಗ, ಅವರು ಈ ಮದುವೆಗೆ ಸಹಮತವನ್ನು ನೀಡಿದ್ದು, ಏಣಕೂರು ಮಂಡಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಅದ್ಧೂರಿ ವಿವಾಹವಾಗಿದ್ದಾರೆ.


