ಪಾರ್ಟ್‌ಟೈಮ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಖಾತೆಯಲ್ಲಿ ಬಂದಿದ್ದ ಜಾಹೀರಾತು ನಂಬಿ ಯುವತಿಯೊಬ್ಬರು 7 12 ಸಾವಿರ ಕಳೆದುಕೊಂಡಿದ್ದು, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಯುವತಿ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿದ್ದ. ಉದ್ಯೋಗ ಬೇಕಿದ್ದರೆ ಸ್ಕ್ಯಾನರ್ ಮೂಲಕ 1 750 ಮುಂಗಡ ಹಣ, ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಅಳತೆ ಫೋಟೊ ನೀಡುವಂತೆ ಸೂಚಿಸಿದ್ದ. ಅದನ್ನೇ ನಂಬಿದ್ದ ಯುವತಿ ಆತ ಹೇಳಿದಂತೆ ಮಾಡಿದ್ದರು.


