ಬಿಹಾರ: ಸ್ವಂತ ಚಿಕ್ಕಪ್ಪನನ್ನೇ ಯುವತಿಯೊಬ್ಬಳು ವಿವಾಹವಾದ ಘಟನೆ ಬಿಹಾರದಲ್ಲಿ ನಡೆದಿದೆ. ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್ ಪ್ರೀತಿ ವಿಷ್ಯ ಇದೀಗ ವಿವಾದಕ್ಕೀಡಾಗಿದೆ.
ಶಿವಶಕ್ತಿ ಕುಮಾರ್ ಹಾಗೂ ಸಜಲ್ ಸಿಂಧು ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 31 ವರ್ಷದ ಮಹಾನಗರ ಪಾಲಿಕೆಯ ಡೆಪ್ಯುಟಿ ಕಮಿಷನರ್ ಶಿವಶಕ್ತಿ ಕುಮಾರ್ 24 ವರ್ಷದ ಸಜಲ್ ಸಿಂಧು ಅವರನ್ನು ಮದುವೆ ಕೂಡ ಆಗಿದ್ದಾರೆ. ಇವರು ಹೊರ ಜಗತ್ತಿಗೆ ಪ್ರೇಮಿಗಳೇ ಆದರೂ ಕೂಡ ಸಂಬಂಧದಲ್ಲಿ ಚಿಕ್ಕಪ್ಪ ಮಗಳು ಆಗಬೇಕು.
ಇವರಿಬ್ಬರ ವಿವಾಹಕ್ಕೆ ಮನೆಯವರು ಒಪ್ಪಿಗೆ ನೀಡಿಲ್ಲ. ಆದ್ರೆ ಈ ಬಗ್ಗೆ ಮಾತನಾಡಿರುವ ಸಜಲ್ ಸಿಂಧು ಮದುವೆ ನಮ್ಮ ವೈಯಕ್ತಿಕ ಹಕ್ಕು, ಇದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಂಬಂಧವನ್ನು ಅಂತ್ಯಗೊಳಿಸಲು ಕುಟುಂಬದವರು ಕಾನೂನಿನ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆದ್ರೆ ನಮಗೆ ಸಂವಿಧಾನದಲ್ಲಿ ಈ ರೀತಿಯ ಒಂದು ಮದುವೆಯಾಗಲಿಕ್ಕೆ ಅವಕಾಶವಿದೆ. ನಾವಿಬ್ಬರು 10 ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ವಿರುದ್ಧ ಕುಟುಂಬಸ್ಥರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಅಂತ ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q