ಗದಗ: ಯುವಕನೊಬ್ಬ ಅಯೋಧ್ಯೆ ಶ್ರೀರಾಮಮಂದಿರ ಚಿತ್ರವನ್ನು ಬೇರೆ ರೀತಿ ಬದಲಾಯಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಶಾಂತಿ ಉಂಟು ಮಾಡಿದ್ದ, ಗದಗ ಜಿಲ್ಲೆಯ ಗಜೇಂದ್ರಗಢದ ವ್ಯಕ್ತಿ ತಾಜುದ್ದೀನ್ ದಫೇದಾರನನ್ನು ಪೊಲೀಸರು ಬಂದಿಸಿದ್ದಾರೆ.
ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ವಿವಾದಾತ್ಮಕ ಪೋಸ್ಟ್ ನಿಂದ ಗಜೇಂದ್ರಗಡ ಪಟ್ಟಣದಲ್ಲಿ ದ್ವೇಷಮಯ ವಾತಾವರಣ ಉಂಟಾಗಿದ್ದು, ಸದ್ಯ ಅಶಾಂತಿ ಉಂಟುಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.


