ಹಾವೇರಿ : ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಡೆದ ಹಬ್ಬ ಅಂದರೆ ಅದು ಕೊಬ್ಬರಿ ಹೋರಿ ಹಬ್ಬ. ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿ ಕಂಡು ಹೋರಿ ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಈ ಹಬ್ಬದ ವೇಳೆ ಸಾವಿರಾರು ಜನ ಅಲ್ಲಿ ನೆರೆದಿರುತ್ತಾರೆ. ಈ ಭಾಗದ ಜನರ ಹೋರಿ ಹಬ್ಬ ಸಂಭ್ರಮವನ್ನು ಹೇಳತೀರದು.
ನೆರೆದಿರುವ ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿಗೆ ಅಭಿಮಾನಿಗಳು ಹೆಚ್ಚು. ಅಂಥಹ ಹೋರಿಗಳ ಸಾಲಲ್ಲಿ ವಾಸನ ಗ್ರಾಮದ ಬ್ರಹ್ಮ ಅನ್ನೋ ಹೋರಿ ಕೂಡಾ ಒಂದಾಗಿತ್ತು. ಕರ್ನಾಟಕದಲ್ಲಿ ನಡೆಯೋ ಪ್ರತಿ ಹೋರಿ ಹಬ್ಬದಲ್ಲಿ ವಾಸನ ಗ್ರಾಮದ ‘ಬ್ರಹ್ಮ’ ಅಭಿಮಾನಿಗಳ ಮನಸ್ಸು ಗೆದ್ದಿದ್ದ. ‘ಬ್ರಹ್ಮ ಇದ್ದಾನೆಂದರೆ ಆ ಹೋರಿ ಹಬ್ಬದ ಕಳೆ ಹೆಚ್ಚುತ್ತಿತ್ತು. ಆದರೆ ಈಗ ‘ಬ್ರಹ್ಮ ತಮಿಳುನಾಡ ಪಾಲಾಗಿದ್ದಾನೆ.
ಹೌದು, ಕರ್ನಾಟಕದ ಹೈ ಸ್ಪಿಡ್ ಎಂದೇ ಪ್ರಖ್ಯಾತಿ ಪಡೆಡಿದ್ದ ಕೊಬ್ಬರಿ ಹೋರಿ ‘ಬ್ರಹ್ಮ ಈಗ ತಮಿಳುನಾಡಿನ ಪಾಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಸನ ಗ್ರಾಮದ, ಮಲ್ಲೇಶಪ್ಪ ಹಾಳಗತನವರ ಎಂಬುವರಿಗೆ ಸೇರಿದ ಈ ಹೋರಿಯನ್ನು ತಮಿಳುನಾಡಿನವರು ಖರೀದಿಸಿದ್ದಾರೆ. ಸುಮಾರು ಪ್ರಶಸ್ತಿಗಳನ್ನ ಗೆದ್ದ ಹೋರಿಯನ್ನ ತಮಿಳುನಾಡಿನ ವಿಕ್ಟರಿ ಎಂಬುವವರು ಖರೀದಿಸಿದ್ದಾರೆ.
ಅಂದ ಹಾಗೆ ಈ ಹೋರಿಯನ್ನು ಖರೀದಿಸಿದ ಮೊತ್ತ ಕೇಳಿದರೆ ಒಮ್ಮೆಗೆ ಶಾಕ್ ಆಗಬೇಕು. ಈ ಹೈ ಸ್ಪೀಡ್ ಹೋರಿ ಮಾರಾಟವಾದದ್ದು ಬರೋಬ್ಬರಿ 19 ಲಕ್ಷ ರೂಪಾಯಿಗೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಸಿ ತಮಿಳು ನಾಡು ಮೂಲದ ವ್ಯಕ್ತಿ ನಮ್ಮ ರಾಜ್ಯದ ಬ್ರಹ್ಮನನ್ನು ಖರೀದಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


