ಪಾವಗಡ: ತಾಲ್ಲೂಕು ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ, ಸಿ ಆರ್ ಪಾಳ್ಯ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆ, ಎ ಎಚ್ ಪಾಳ್ಯ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಿಸಿ ರಸ್ತೆ, ಗುಜ್ಜನಡು ಗ್ರಾಮದಲ್ಲಿ 15 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ವೆಂಕಟರಮಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಮುಖಂಡರುಗಳಾದ ಬೋಜರಾಜ್, ನಂಜುಂಡಪ್ಪ,ಸೀನಪ್ಪ, ಡಿ.ಮಂಜುನಾಥ್, ಕೆ.ಎಚ್. ಪ್ರಕಾಶ್, ಸ್ವಾರಣ್ಣ,ಅನಿಲ್ ಕುಮಾರ್, ಜಿ.ಸಿ.ದೇವರಾಜ್,ಗುತ್ತಿಗೆದಾರರಾದ ಕೋಡೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸುಜಿತ್,ಮಹಿಳಾ ನಾಯಕಿ ನಾಗಮ್ಮ, ಪೂಜಾರಪ್ಪ, ಸಾಮಾಜಿಕ ಜಾಲತಾಣ ಸದಸ್ಯ ಪಾಪಣ್ಣ ವಿ.ಹೆಚ್. ಪಾಳ್ಯ ಸೇರಿದಂತೆ ಲೋಕೋಪಯೋಗಿ ಇಲಾಖೆ ಎಇಇ ಅನಿಲ್ ಕುಮಾರ್, ಸತ್ಯೆಂದ್ರ ಪ್ರಸಾದ್ ಮತ್ತಿತರರು ಹಾಜರಿದ್ದರು.
ವರದಿ: ದೇವರಹಟ್ಟಿ ನಾಗರಾಜು, ಕಸಬಾ ಹೋಬಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB