ಚಿಕ್ಕಮಗಳೂರು: ಮಹಿಳೆಯರ ಹೋರಾಟದ ಬದುಕಿನಲ್ಲಿ ಸಂಘರ್ಷಗಳು ಸಾಮಾನ್ಯ. ಅದರಲ್ಲಿಯೂ ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ನಾವು ಪ್ರತಿಹಂತದಲ್ಲಿಯೂ ಕಷ್ಟಗಳನ್ನು ಎದುರಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ನಯನ ಮೋಟಮ್ಮ ಆಯೋಜನೆಯ ಆಶಾಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾವುಕರಾಗಿ ಮಾತನಾಡಿದ ಅವರು ಹೆಣ್ಣು ಹುಟ್ಟಿನಿಂದ ಸಾವಿನವರೆಗೂ ಸಮಸ್ಯೆ, ಕಷ್ಟ, ಸಂಕಷ್ಟದಲ್ಲಿ ಬೆಂದು ಬದುಕಬೇಕಿದೆ ಎಂದು ಹೆಣ್ತನದ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಇನ್ನು ಮೂರು ತಿಂಗಳುಗಳ ಕಾಲ ಕೆಟ್ಟದ್ದನ್ನು ನೋಡದೇ, ಕೇಳದೆ ಮತ್ತು ಮಾತನಾಡದೆ ಮೌನವಾಗಿದ್ದುಕೊಂಡು ನನ್ನ ಅಭಿವೃದ್ಧಿ ಕಾರ್ಯಗಳ ಮೂಲಕ ಚುನಾವಣೆ ಗೆಲ್ಲಲಿದ್ದೇನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


