ಓಲಾ ಕ್ಯಾಬ್ ಬುಕ್ಕಿಂಗ್ ರದ್ದುಗೊಳಿಸಿದ್ದಕ್ಕೆ ಕುಪಿತಗೊಂಡ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಶ್ಲೀಲ ಸಂದೇಶ ಕಳುಹಿಸಿದ್ದ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಸಲೂರು ನಿವಾಸಿ ದಿನೇಶ್ ಬಂಧಿತ ಆರೋಪಿ. ಶಾಲೆಯಲ್ಲಿ ಪೋಷಕರ ಸಭೆ ಮುಕ್ತಾಯವಾದ ಬಳಿಕ ಪುತ್ರಿಯೊಂದಿಗೆ ಮನೆಗೆ ತೆರಳಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಬರುವುದು ತಡವಾಗಿದ್ದಕ್ಕೆ ಬುಕ್ಕಿಂಗ್ ರದ್ದುಗೊಳಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಚಾಲಕ ಮಹಿಳೆಗೆ ಕರೆ ಮಾಡಿ ನಿಂದಿಸಿದ್ದ.
ಕ್ಯಾಬ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಮಹಿಳೆಯ ವಾಟ್ಸಾಪ್ ಗೆ ಚಾಲಕ ಅಶ್ಲೀಲ ಫೋಟೋಸ್ ಮತ್ತು ವಿಡಿಯೋಗಳನ್ನು ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 32 ವರ್ಷದ ಮಹಿಳೆ, ತನ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಕ್ಯಾಬ್ ಬುಕ್ ಮಾಡಿದ್ದಾಳೆ. ಕ್ಯಾಬ್ ಬರುವುದು ತಡವಾಗಿದ್ದರಿಂದ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ಮಹಿಳೆಯ ವಾಟ್ಸಪ್‌ಗೆ ನಗ್ನ ಚಿತ್ರ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾನೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.