nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?

    February 14, 2026

    ಹಾವೇರಿಯಲ್ಲಿ ಕಾಂಗ್ರೆಸ್‌ ನದ್ದು ‘ಭ್ರಷ್ಟಾಚಾರದ ಸಾಧನೆಯ ಸಮಾವೇಶ’: ಬಸವರಾಜ ಬೊಮ್ಮಾಯಿ ವ್ಯಂಗ್ಯ

    February 14, 2026

    ಬಾವಿಗೆ ಬಿದ್ದ ಚಿರತೆ: ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆ!

    February 14, 2026
    Facebook Twitter Instagram
    ಟ್ರೆಂಡಿಂಗ್
    • ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?
    • ಹಾವೇರಿಯಲ್ಲಿ ಕಾಂಗ್ರೆಸ್‌ ನದ್ದು ‘ಭ್ರಷ್ಟಾಚಾರದ ಸಾಧನೆಯ ಸಮಾವೇಶ’: ಬಸವರಾಜ ಬೊಮ್ಮಾಯಿ ವ್ಯಂಗ್ಯ
    • ಬಾವಿಗೆ ಬಿದ್ದ ಚಿರತೆ: ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆ!
    • ಅದೃಷ್ಟ ಒಲಿದು ಬಂದಾಗ
    • ತುರುವೇಕೆರೆ: ಮೈತ್ರಿ ಟಿಕೆಟ್ ಗಾಗಿ ಜಟಾಪಟಿ | ಕೃಷ್ಣಪ್ಪ, ಚಂದ್ರೇಶ್ ಪೈಪೋಟಿ ನಡುವೆಯೇ ಮಸಾಲ ಜಯರಾಮ್ ಅಖಾಡಕ್ಕೆ!
    • ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!
    • ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ
    • ಇ–ಪೌತಿ ಯೋಜನೆ: ಜನಪರ ಕೆಲಸ ಮಾಡಿದ  ತಹಶೀಲ್ದಾರ್ ಕುಂಞಿ ಅಹಮದ್, ಎಡಿಎಲ್‌ಆರ್ ಜಗದೀಶ್ ಅವರಿಗೆ ಅಭಿನಂದನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕ ರಾಜ್ಯದ ಕುರಿತು ಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ: ಪ್ರೊ.ರಾಜೇಂದ್ರಚೆನ್ನಿ
    ತುಮಕೂರು December 14, 2024

    ಕರ್ನಾಟಕ ರಾಜ್ಯದ ಕುರಿತು ಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ: ಪ್ರೊ.ರಾಜೇಂದ್ರಚೆನ್ನಿ

    By adminDecember 14, 2024No Comments2 Mins Read
    shishunala sharifa

    ತುಮಕೂರು: ಕರ್ನಾಟಕರಾಜ್ಯದಕುರಿತುಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ. ಕವಿರಾಜ ಮಾರ್ಗದಲ್ಲಿ ಕನ್ನಡ ರಾಜ್ಯದ ಕುರಿತು, ಕನ್ನಡಿಗರ ಬಗ್ಗೆ ಉಲ್ಲೇಖವಿದ್ದರೂ ಕರ್ನಾಟಕ ಏಕೀಕರಣದ ನಂತರವೇ ಕನ್ನಡ ಸಮುದಾಯಗಳು ಒಂದೇ ಸೂರಿನಡಿ ನೆಲೆಕಂಡಿದ್ದುಎಂದು ಲೇಖಕ ಪ್ರೊ.ರಾಜೇಂದ್ರಚೆನ್ನಿ ತಿಳಿಸಿದರು.

    ತುಮಕೂರು ವಿಶ್ವವಿದ್ಯಾನಿಲಯಸಂತ ಶಿಶುನಾಳ ಶರೀಫಅಧ್ಯಯನ ಪೀಠವು ಶುಕ್ರವಾರ ಆಯೋಜಿಸಿದ್ದ ‘ಸ್ಟೇಟ್ ಮ್ಯಾಟರ್ಸ್: ಕನ್ನಡ ಸಬ್–ನ್ಯಾಷನಲಿಸಂಅಂಡ್ ಸ್ಟೇಟ್ಫಾರ್ಮೆಷನ್’ ಪುಸ್ತಕದಕುರಿತು ಮಾತನಾಡಿದರು.


    Provided by
    Provided by

    ಕರ್ನಾಟಕ ಏಕೀಕರಣಕ್ಕೂ ಮುನ್ನಕನ್ನಡ ಮಾತನಾಡುವ ಸಮುದಾಯಗಳು 30 ತುಂಡುಗಳಾಗಿದ್ದವು. ಸಮುದಾಯಗಳನ್ನು ತುಂಡರಿಸಿ ಬ್ರಿಟಿಷ್ ಸರ್ಕಾರ ಆಡಳಿತ ನಡೆಸುತ್ತಿತ್ತು. ಈ ನಡೆಯಿಂದ ಕನ್ನಡಿಗರು ಒಗ್ಗೂಡಿ ಬಾಳಲು ಸಾಧ್ಯವಾಗಿರಲಿಲ್ಲ. ಏಕೀಕರಣದ ಏಕರೂಪ ಚಳುವಳಿ ವಿರೋಧಾಭಾಸದ ವೈರುಧ್ಯಗಳಿಂದ ಕೂಡಿ ಕರ್ನಾಟಕ ರಾಜ್ಯವಾಯಿತು ಎಂದು ತಿಳಿಸಿದರು.

    ಒಕ್ಕಲಿಗರ ಪ್ರಾಬಲ್ಯ ಹೊಂದಿದ್ದಅಂದಿನ ಮೈಸೂರು ರಾಜ್ಯ ಏಕೀಕರಣವನ್ನು ವಿರೋಧಿಸಿತು. ಮೇಲ್ಜಾತಿಯವರ, ದಲಿತರ, ಇತರೆ ಸಮುದಾಯಗಳ ಭಾಗವಹಿಸುವಿಕೆ ಅನುಸಂಧಾನ ಮಾರ್ಗವನ್ನುಕಂಡಿತು. ಆಧುನಿಕ ಮುದ್ರಣ ಯಂತ್ರಗಳ ಸಹಾಯದಿಂದ ಬ್ರಿಟಿಷರು ಧಾರ್ಮಿಕ ವಲಯದಿಂದ ಪುಸ್ತಕಗಳನ್ನು ಜಾತ್ಯತೀತ ವಲಯಕ್ಕೆ ತಂದರು. ಕ್ರಿಶ್ಚಿಯನ್ ಮಿಷನರಿಗಳಲ್ಲಿ ಕನ್ನಡದ ಅರಿವನ್ನು ಮೂಡಿಸುವ ಕಾರ್ಯಗಳು ಚುರುಕುಗೊಂಡವು ಎಂದು ತಿಳಿಸಿದರು.

    ಕ್ರಿಶ್ಚಿಯನ್ ಮಿಷನರಿಗಳಲ್ಲಿ ಮತಾಂತರದ ಹೊರತಾಗಿಕನ್ನಡ ಭಾಷೆಯನ್ನು ಬೆಳೆಸುವ ಅರಿವಿನ ಕೆಲಸ ಪ್ರವೃತ್ತಿಯಾಯಿತು. ಆಲೂರು ವೆಂಕಟರಾವ್ ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಉದಾರ ಮನೋಭಾವ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗಿದ್ದ ಪ್ರಾಯೋಗಿಕ ಮನಸ್ಥಿತಿ, ಕುವೆಂಪು ಅವರ ಭಾಷಾ ಪ್ರಬುದ್ಧತೆ ಕನ್ನಡವನ್ನು ಶಿಖರಕ್ಕೇರಿಸಿತು ಎಂದರು.

    ಲೇಖಕ ಪ್ರೊ.ಚಂದನ್ ಗೌಡ ಪುಸ್ತಕದ ಕುರಿತು ಮಾತನಾಡಿ, ರಾಜ್ಯ ಮತ್ತು ಭಾಷೆಯ ಅಸ್ಮಿತೆ ಕುರಿತು ಗಂಭೀರವಾಗಿ ವಿಚಾರ ಮಾಡಬೇಕಿದೆ. ಬ್ರಿಟಿಷರು ತೊರೆದ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಷ್ಟ್ರ ಮಾಡುವುದರಲ್ಲಿಎಷ್ಟರ ಮಟ್ಟಿಗೆ ಸಫಲರಾದೆವು ಎಂಬುದು ಪ್ರಶ್ನಾರ್ಥಕ. ರಾಜಕೀಯದಿಂದ ಸಮುದಾಯಗಳಲ್ಲಿ ಸಮಾನತೆ ಮಾಯವಾಗಿದೆ ಎಂದರು.

    ಕುವೆಂಪು ಅವರ ‘ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು’, ‘ವಿಶ್ವಮಾನವ’ ಸಂದೇಶ ಈಗಿನ ಕಾಲಕ್ಕೆ ಎಷ್ಟು ಪ್ರಸ್ತುತವೆಂದು ಆಲೋಚಿಸುವ ಸಂದರ್ಭವಾಗಿದೆ. ಕನ್ನಡದ ರಾಷ್ಟ್ರೀಯತೆಯನ್ನು ಚಾರಿತ್ರಿಕವಾಗಿ ತೊರಿಸುವ ಅಧ್ಯಯನಗಳಿಗೆ ಕೊರತೆಯಿದೆ. ಕರ್ನಾಟಕ ರಾಜ್ಯ ಪೂರ್ವ ಸಿದ್ಧತೆಯಾಗಿರಲಿಲ್ಲವೆಂಬ ಸತ್ಯ ಈಗಲಾದರೂ ಅರಿಯಬೇಕಿದೆ ಎಂದು ತಿಳಿಸಿದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎನ್.ಎಸ್. ಗುಂಡೂರ, ಅಧ್ಯಯನ ಪೀಠಗಳು ಕಾರ್ಯಪ್ರವೃತ್ತರಾಗಬೇಕು. ಅಧ್ಯಯನಶೀಲ ಚರ್ಚೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯದ ಕುರಿತು ವಿಚಾರ ಸಂಕಿರಣಗಳಾಗಬೇಕು. ಕನ್ನಡದ ಬೌದ್ಧಿಕ ಲೋಕಕ್ಕೆ ಅಧ್ಯಯನದ ಕೊರತೆಯಿದೆ ಎಂದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!

    February 14, 2026

    ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ

    February 14, 2026

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?

    February 14, 2026

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಮದುವೆ ಸಮಾರಂಭಕ್ಕೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆಯ…

    ಹಾವೇರಿಯಲ್ಲಿ ಕಾಂಗ್ರೆಸ್‌ ನದ್ದು ‘ಭ್ರಷ್ಟಾಚಾರದ ಸಾಧನೆಯ ಸಮಾವೇಶ’: ಬಸವರಾಜ ಬೊಮ್ಮಾಯಿ ವ್ಯಂಗ್ಯ

    February 14, 2026

    ಬಾವಿಗೆ ಬಿದ್ದ ಚಿರತೆ: ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆ!

    February 14, 2026

    ಅದೃಷ್ಟ ಒಲಿದು ಬಂದಾಗ

    February 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.