ಚಿತ್ರದ ಶೂಟಿಂಗ್ ವೇಳೆ ನಟ ಚಿಯಾನ್ ವಿಕ್ರಮ್ ಗಾಯಗೊಂಡಿದ್ದಾರೆ. ಹೊಸ ಚಿತ್ರ ತಂಗಳನ್‌ಗಾಗಿ ತಾಲೀಮು ನಡೆಸುತ್ತಿದ್ದಾಗ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಕ್ಕೆಲುಬಿಗೆ ಗಾಯವಾಗಿದೆ. ಅಪಘಾತದಲ್ಲಿ ವಿಕ್ರಮ್ ಅವರ ಪಕ್ಕೆಲುಬುಗಳು ಮುರಿತವಾಗಿವೆ ಎಂದು ವ್ಯವಸ್ಥಾಪಕ ಸೂರ್ಯನಾರಾಯಣನ್ ಟ್ವೀಟ್ ಮಾಡಿದ್ದಾರೆ. ಅಪಘಾತದ ನಂತರ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು.
ವಿಕ್ರಮ್ ಕೆಲ ಕಾಲ ಚಿತ್ರೀಕರಣದಿಂದ ದೂರ ಇರಲಿದ್ದಾರೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ವಿಕ್ರಮ್ ಅವರು ಶೀಘ್ರದಲ್ಲೇ ಪೂರ್ಣ ಆರೋಗ್ಯಕ್ಕೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲರ ಪ್ರೀತಿಗೆ ವಿಕ್ರಮ್ ಧನ್ಯವಾದ ಹೇಳಿದ್ದು, ಆದಷ್ಟು ಬೇಗ ಹಿಂತಿರುಗುವುದಾಗಿ ಭರವಸೆ ನೀಡಿದ್ದಾರೆ ಎಂದು ಸೂರ್ಯನಾರಾಯಣ್ ಟ್ವೀಟ್ ಮಾಡಿದ್ದಾರೆ. ತಂಗಳನ್ ಪಾ ರಂಜಿತ್ ನಿರ್ದೇಶನದ ಚಿತ್ರ. ಚಿತ್ರಕ್ಕಾಗಿ ನಟ ಭಾರಿ ಮೇಕ್ ಓವರ್ ಮಾಡಿದ್ದಾರೆ.
ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವನ್ನು ಕೆಇ ಜ್ಞಾನವೇಲ್ ರಾಜ ನಿರ್ಮಿಸಿದ್ದಾರೆ. ಮಲಯಾಳಂನ ಪಾರ್ವತಿ ಮತ್ತು ಮಾಳವಿಕಾ ಮೋಹನನ್ ಚಿತ್ರದಲ್ಲಿ ನಾಯಕಿಯರಾಗಿದ್ದಾರೆ. ‘ತಂಗಳನ್’ ಚಿತ್ರದಲ್ಲಿ ಪಶುಪತಿ, ಹರಿ ಕೃಷ್ಣನ್, ಅನ್ಪು ದುರೈ ಮತ್ತು ಇತರರು ನಟಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


