ಮಿಡಿಗೇಶಿ: ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಕೆಪಿಟಿಸಿಎಲ್ ಕಚೇರಿ ಹಿಂಬದಿಯ ಜಮೀನಿನಲ್ಲಿ ಇದ್ದ ಹುಲ್ಲಿನ ಬಣವೆಗೆ ಶನಿವಾರ ರಾತ್ರಿ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮವಾಗಿ ಹುಲ್ಲಿನ ಬಣವೆ ಸಂಪೂರ್ಣ ಭಸ್ಮವಾಗಿದೆ.
ಮಾರುತಿನಗರದ ಸಂಜಕ್ಕ ಎಂಬುವರು ತನ್ನ ಸಂಸಾರ ನಿರ್ವಹಣೆ ಸಲುವಾಗಿ ಎರಡು ಸೀಮೆ ಹಸುಗಳನ್ನು ಸಾಲ ಮಾಡಿ ಸಾಕಿಕೊಂಡಿದ್ದರು. ಈ ಹಸುಗಳಿಗಾಗಿ ಹುಲ್ಲಿನ ಬಣವೆ ದಾಸ್ತಾನು ಮಾಡಿದ್ದರು. ಆದರೆ ಆಕಸ್ಮಿಕ ಬೆಂಕಿ ಬಿದ್ದು ಬವಣೆ ಭಸ್ಮವಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ಧರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


