ಸರಗೂರು: ತಾಲ್ಲೂಕಿನ ಹುಲ್ಲೇಮಾಳ ಗ್ರಾಮದಲ್ಲಿ ರಾಗಿ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 5 ಎಕರೆ ರಾಗಿ ಮೆದೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಗ್ರಾಮದ ಮಂಜುನಾಥ್,&ಬಸವರಾಜು, ಎಂಬುವರಿಗೆ ಸೇರಿದ ಎರಡು ರಾಗಿ ಮೆದೆಗಳು ಶನಿವಾರ ಮಧ್ಯಾಹ್ನ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ರಾಗಿ ಮದೆ ಭಸ್ಮವಾಗಿದೆ. ಮನೆಯ ಹಿತ್ತಲಿನಲ್ಲಿ 15 ದಿನಗಳ ಹಿಂದೆ ಕಟಾವು ಮಾಡಿ ರಾಗಿ ಮೆದೆಯನ್ನು ಹಾಕಲಾಗಿತ್ತು, ಆದರೆ ಇಂದು ಮೆದೆಗೆ ಬೆಂಕಿ ಬಿದ್ದು ರಾಗಿ ಮೆದೆ ಸಂಪೂರ್ಣ ಭಸ್ಮವಾಗಿದೆ. ತಕ್ಷಣ ಅಕ್ಕಪಕ್ಕದ ಮನೆಯವರು ಬಂದು ಬೆಂಕಿಯನ್ನು ನಂದಿಸಲು ಶ್ರಮ ಪಟ್ಟರೂ ಬೆಂಕಿ ಹುರಿಯು ಹೆಚ್ಚಾಗಿ ರಾಗಿ ಮೆದೆ ಸಂಪೂರ್ಣ ಭಸ್ಮವಾಗಿದೆ.
ಇದೆ ಸಂದರ್ಭದಲ್ಲಿ ರೈತ ಮಂಜುನಾಥ್, ಮಾತನಾಡಿ ನಾವು ಕಷ್ಟಪಟ್ಟು ಕೃಷಿ ಮಾಡಿ, ರಾಗಿ ಬೆಳೆದು ಮೆದೆ ಹಾಕಿ ಎರಡು ಮೂರು ದಿನಗಳಲ್ಲಿ ರಾಗಿ ಒಕ್ಕಣೆ ಮಾಡಬೇಕಿತ್ತು, ಅಂತಹದರಲ್ಲಿ ಮೆದೆಗೆ ಬೆಂಕಿ ಬಿದ್ದು ರಾಗಿ ಮೆದೆ ಸಂಪೂರ್ಣ ಭಸ್ಮವಾಗಿದೆ. ಈ ರೀತಿ ಆಗಿರುವುದರಿಂದ ನಮಗೆ ನಷ್ಟವಾಗಿದೆ ಹಾಗೆ ಹಸು ಕರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ರೈತ ಮಂಜುನಾಥ್ ತಮ್ಮ ಅಳಲನ್ನು ತೋಡಿಕೊಂಡರು.
ಆಕಸ್ಮಿಕವಾಗಿ ಎರಡು ಮೆದೆಗಳು ಬೆಂಕಿಗೆ ಆಹುತಿಯಾಗಿರುವುದರಿಂದ ಸುಮಾರು 2ಲಕ್ಷ್ಮಕ್ಕೂ ಹೆಚ್ಚು ನಷ್ಟವಾಗಿದೆ. ಕೂಡಲೇ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ನಾಗಪ್ಪ ಬೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


