ಗುಜರಾತ್: ನ್ಯಾಯಮೂರ್ತಿಗಳಿಗೆ ಲಂಚ ಕೊಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆಯೊಂದು ಗುಜರಾತ್ ನಲ್ಲಿ ನಡೆದಿದ್ದು, ಆರೋಪಿಯು ಮುಚ್ಚಿದ ಲಕೋಟೆಯಲ್ಲಿ ನ್ಯಾಯಮೂರ್ತಿಗೆ ಲಂಚ ನೀಡಿದ್ದು, ತಕ್ಷಣವೇ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.
ಗುಜರಾತ್ ನ ಗೋಧ್ರಾದಲ್ಲಿ ವಿಚಾರಣೆಯ ವೇಳೆ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಆರೋಪಿ ಬಾಪುಭಾಯಿ ಸೋಲಂಕಿ 35,000 ರೂಪಾಯಿ ಲಂಚ ನೀಡಲು ಮುಂದಾಗಿದ್ದಾನೆ. ತನ್ನ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಲಂಚ ನೀಡುವ ಮೂಲಕ ಆರೋಪಿ ಕೇಳಿಕೊಂಡಿದ್ದ.
ಮಹಿಸಾಗರ ಜಿಲ್ಲೆಯ ವೀರ್‌ಪುರ ತಹಸಿಲ್‌ನ ಸರಡಿಯಾ ಗ್ರಾಮದ ನಿವಾಸಿ ಸೋಲಂಕಿ 2023 ರಿಂದ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ಎದುರಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪನಮ್ ಯೋಜನೆಯಡಿ ಭದರ್ ಕಾಲುವೆ ವಿತರಣಾ ಉಪವಿಭಾಗದ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಈ ಪ್ರಕರಣದ ವಿಳಂಬದಿಂದ ಹತಾಶೆಗೊಂಡು ಶೀಘ್ರವೇ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ವಿಚಾರಣೆಯ ಸಮಯದಲ್ಲಿ, ಸೋಲಂಕಿ ಲಕೋಟೆಯೊಂದಿಗೆ ನ್ಯಾಯಾಧೀಶರನ್ನು ಸಂಪರ್ಕಿಸಿ ತ್ವರಿತ ವಿಚಾರಣೆಗೆ ವಿನಂತಿಸಿದ್ದ. ನ್ಯಾಯಾಧೀಶರು ಲಕೋಟೆಯನ್ನು ಸ್ವೀಕರಿಸಲು ನಿರಾಕರಿಸಿ ಅದನ್ನು ತೆರೆದು ತೋರಿಸುವಂತೆ ಸೋಲಂಕಿಗೇ ಸೂಚಿಸಿದಾಗ ಅದರಲ್ಲಿ ನಗದು ಇದ್ದದ್ದು ಗೊತ್ತಾಯಿತು. ನ್ಯಾಯಾಧೀಶರು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದು, ಅವರು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೋಲಂಕಿಯನ್ನು ಕನ್ನಡಿಗೆ ತೆಗೆದುಕೊಳ್ಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx